Oplus_0

ವಾಡಿ ಬಿಜೆಪಿ ಕಚೇರಿಯಲ್ಲಿ ಸಮರ್ಪಣಾ ದಿನಾಚರಣೆ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜನಸಂಘದ ಸಿದ್ದಾಂತವಾದಿ ಪಂಡಿತ ದೀನದಯಾಳ್ ಉಪಾಧ್ಯಾಯರ ಪುಣ್ಯತಿಥಿಯ ಅಂವಾಗಿ ಸಮರ್ಪಣಾ ದಿನ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪಂಡಿತ್ ದಿನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತೀಯ ಜನಸಂಘದ ಪ್ರಮುಖ ಸಿದ್ಧಾಂತವಾದಿ, ತತ್ವಜ್ಞಾನಿ ಮತ್ತು ರಾಷ್ಟ್ರೀಯ ನಾಯಕರಾಗಿದ್ದ ಪಂಡಿತ್ ಜೀ, ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯ ಪರಿಕಲ್ಪನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗೆ ಶ್ರಮಿಸಿದ ಮಹಾನ್ ರಾಷ್ಟ್ರಪ್ರೇಮಿ ಎಂದರು.

ದೇಶದ ಏಕತೆಗಾಗಿ, ಸಂಘಟನೆಯ ಸೇವೆಯಲ್ಲಿದ್ದ ಅವರು11 ಫೆಬ್ರವರಿ 1968 ರಂದು ಮೊಘಲಸರಾಯ್ ರೈಲ್ವೆ ನಿಲ್ದಾಣದ ಬಳಿ ನಿಗೂಢವಾಗಿ ಸಾವನ್ನಪ್ಪಿದರು. ಅವರ ಜ್ಞಾನ, ಸರಳತೆ ಮತ್ತು ದೇಶಪ್ರೇಮದ ಆದರ್ಶಗಳನ್ನು ಸ್ಮರಿಸುತ್ತಾ, ಅವರ ಪುಣ್ಯತಿಥಿಯನ್ನು ನಾವು ಪ್ರತಿವರ್ಷ ಸಮರ್ಪಣಾ ದಿನವಾಗಿ ಆಚರಿಸುತ್ತಿದ್ದೇವೆ.

ಈಗಿನ ನಮ್ಮ ಬಿಜೆಪಿ ಪಕ್ಷವು ವಿಶ್ವದಲ್ಲೇ ಬೃಹದಾಕಾರವಾಗಿ ಬೆಳೆಯಲಿಕ್ಕೆ ಪಂಡಿತ್ ಜೀ ಅವರ ಸೈದ್ಧಾಂತಿಕ ಮಾರ್ಗದರ್ಶನ ಮತ್ತು ನೈತಿಕ ಸ್ಪೂರ್ತಿ ಯೇ ಮೂಲಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅರ್ಜುನ ಕಾಳೇಕರ್, ಅಶೋಕ ಪವಾರ, ಮನಿಷ್ ವಾಲಿಯ, ಹೀರಾ ನಾಯಕ, ಚಿಕ್ಕಯ್ಯ ಸ್ವಾಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!