Oplus_0

ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ 4 ನೇ ಪುಣ್ಯಸ್ಮರಣೆ, ವಾಲ್ಮೀಕಿ ನಾಯಕ ಜನಮನ ಗೆದ್ದ ಅಪರೂಪದ ರಾಜಕಾರಣಿ: ಕಂಬಳೇಶ್ವರ ಶ್ರೀ 

ನಾಗಾವಿ ಎಕ್ಸಪ್ರೆಸ್

ವಾಡಿ: ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ ಸರಳ ಸಜ್ಜನರಾಗಿದ್ದು, ಜನಮನ ಗೆದ್ದ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ವಾಲ್ಮೀಕಿ ನಾಯಕ ನಿವಾಸದ ಆವರಣದಲ್ಲಿ ಅವರ ಅಭಿಮಾನಿ ಬಳಗ ಹಾಗೂ ಕುಟುಂಬ ವರ್ಗದವರು ಬುಧವಾರ ಹಮ್ಮಿಕೊಂಡಿದ್ದ ದಿ.ವಾಲ್ಮೀಕಿ ನಾಯಕ ಅವರ 4 ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ವಾಲ್ಮೀಕಿ ನಾಯಕ ಅವರನ್ನು ಇಂದಿಗೂ ಜನರು ಸ್ಮರಿಸುತ್ತಾರೆ ಎಂದರೆ ಅವರು ಮಾಡಿರುವ ಜನಸೇವೆಯೇ ಕಾರಣ ಅದರಲ್ಲೂ ಗುರುಹಿರಿಯರನ್ನು ಗೌರವದಿಂದ ಕಂಡು ಎಲ್ಲರನ್ನೂ ತೆಗೆದುಕೊಂಡು ಹೊಗುವ ಗುಣ ಅವರಲ್ಲಿತ್ತು ಎಂದು ಸ್ಮರಿಸಿದರು. ತಂದೆಯ ಹಾದಿಯಲ್ಲಿ ನಡೆಯುತ್ತಿರುವ ಪುತ್ರ ವಿಠಲ್ ನಾಯಕ ಕೂಡ ಸಾಮಾಜಿಕ ಚಟುವಟಿಕೆಗಳಲ್ಲಿ ಹಾಗೂ ಜನಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಲಕಟ್ಟಿ ಶ್ರೀ ರಾಜಶೇಖರ ಸ್ವಾಮಿಗಳು ಮಾತನಾಡಿ, ವಾಲ್ಮೀಕಿ ನಾಯಕ ಅವರ ಪುಣ್ಯಸ್ಮರಣೆ ನಿಮಿತ್ತ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿರುವ ಪುತ್ರ ವಿಠಲ್ ನಾಯಕ ಅವರ ಸೇವೆ ಸಾರ್ಥಕ ಎಂದರು.

ಕೊಂಚೂರ ಶ್ರೀ ಶ್ರೀಧರಾನಂದ ಸ್ವಾಮಿಗಳು, ಮುಖಂಡರಾದ ಬಸವರಾಜ ಪಂಚಾಳ, ಚಂದ್ರಶೇಖರ ಅವಂಟಿ, ರಾಜು ಮುಕ್ಕಣ್ಣ, ಬಾಬುಮಿಯ್ಯಾ, ಸಿದ್ದಣ್ಣ ಕಲ್ಲಶೆಟ್ಟಿ, ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿದರು.

ರಾವೂರ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಮುಖಂಡರಾದ ಲಿಂಗಾರೆಡ್ಡಿ ಭಾಸರೆಡ್ಡಿ, ರವೀಂದ್ರ ಸಜ್ಜನಶೆಟ್ಟಿ, ನಾಗರಾಜ ಭಂಕಲಗಿ, ಭಗವತ್ ಸುಳೆ, ಭೀಮರೆಡ್ಡಿ ಕುರಾಳ, ಆನಂದ ಪಾಟೀಲ ನರಿಬೋಳ, ಅಂಬರೀಷ್ ಸುಲೇಗಾಂವ, ಕೋಟೇಶ್ವರ ರೇಷ್ಮಿ, ಹೀರು ರಾಠೋಡ, ಗೋಪಾಲ ರಾಠೋಡ, ಪೋಮು ಲಾಡ್ಲಾಪೂರ, ತಮ್ಮಣ್ಣ ಡಿಗ್ಗಿ, ಶಂಕರ ಚವ್ಹಾಣ, ಅಕ್ಕಮಹಾದೇವಿ, ನಾಗುಬಾಯಿ ಜಿತುರೆ, ದೀಪಕ್ ಹೊಸ್ಸುರಕರ್, ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಸಾಬಣ್ಣ ಅಣಮಿ, ಈರಣ್ಣ ಮಲಕಂಡಿ, ಶಾಂತಕುಮಾರ್ ಎಣ್ಣಿ, ಅಂಬಾದಾಸ ಚವ್ಹಾಣ, ಸುರೇಶ್ ಬೆನಕನಳ್ಳಿ, ಮಹೇಶ್ ಬಾಳಿ, ಗುಂಡು ಮತ್ತಿಮುಡ್, ಮಲ್ಲಿಕಾರ್ಜುನ ಅಲ್ಲೂರಕರ್, ಮೇಘನಾಥ ಯಾಗಾಪೂರ, ರವಿ ರಾಠೋಡ, ಮಲ್ಲು ಇಂದೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೀರಣ್ಣ ಯಾರಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಉಚಿತ ನೇತ್ರ ತಪಾಸಣೆ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!