Oplus_0

ಯಾದಗಿರಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ | ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಗಾರ: ಹೊಸಮನಿ

ನಾಗಾವಿ ಎಕ್ಸಪ್ರೆಸ್

ಯಾದಗಿರಿ: ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾಮಟ್ಟದಲ್ಲಿ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಗಾರ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನ ತರಬೇತಿ ಶಿಬಿರವನ್ನು ಈ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ರವೀಂದ್ರನಾಥ್ ಎಸ್ ಹೊಸಮನಿ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಉಪನ್ಯಾಸಕರ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ, ವಾರ್ಷಿಕ ಕ್ರಿಯಾಯೋಜನೆಗಳ ರೂಪರೇಷಗಳು ಹಾಗೂ ಶೈಕ್ಷಣಿಕ ಸಮಾವೇಶಗಳ ಆಯೋಜನಗಳ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು.

ಜಿಲ್ಲಾ ಸಂಘ ಮತ್ತಷ್ಟು ಬಲವರ್ಧನೆಗೊಳಿಸುವ ದೃಷ್ಟಿಯಲ್ಲಿ ಜಿಲ್ಲಾ ಸಂಘಕ್ಕೆ ಲೆಕ್ಕಪರಿಶೋಧಕರಾಗಿ ಸುರೇಶಬಾಬು ಅರುಣಿ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಶಹಾಪುರ, ಶೈಕ್ಷಣಿಕ ಕಾರ್ಯದರ್ಶಿಯಾಗಿ ಸಾಬಪ್ಪ ಮೇತ್ರಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಭೀಮರಾಯನಗುಡಿ, ಸಂಘಟನಾ ಕಾರ್ಯದರ್ಶಿಗಳಾಗಿ ದಶರತ್ ಕೆ , ಶಾಂತ ಮಲ್ಲಯ್ಯ ಮತ್ತು ಭೀಮಶ್ಯಪ್ಪ, ಕಾನೂನು ಮತ್ತು ಎನ್‌ಪಿಎಸ್ ಸಲಹೆಗಾರರಾಗಿ ಮಾನಪ್ಪ ದೊಡ್ಡಮನಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಚಕ್ರ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ, ಶೇಖಪ್ಪ ವಾರಿ, ಸಿ.ಬಿ ಪದವಿ ಪೂರ್ವ ಕಾಲೇಜು ಶಹಾಪುರ, ಮಹಿಳಾ ಪ್ರತಿನಿಧಿಯಾಗಿ ಜ್ಯೋತಿಲತಾ ತಡಿಬಿಡಿಮಠ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಗುರಮಿಠಕಲ್ ರವರನ್ನು ಜಿಲ್ಲಾ ನಾಮನಿರ್ದೇಶಿತ ಪದಾಧಿಕಾರಿಗಳಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಸುದರ್ಶನ್ ರೆಡ್ಡಿ, ಯಾದಗಿರಿ ತಾಲೂಕು ಅಧ್ಯಕ್ಷ ಸಾಬಯ್ಯ ಕವಲ್ದಾರ್, ಶಹಾಪುರ ತಾಲೂಕು ಅಧ್ಯಕ್ಷ ಭೀಮಣ್ಣ ಅಂಚೆಸೂಗೂರ, ಸುರಪುರ ತಾಲೂಕು ಅಧ್ಯಕ್ಷ ಮೊನಯ್ಯ ಗೋನಾಲ್, ಹುಣಸಗಿ ತಾಲೂಕು ಅಧ್ಯಕ್ಷ ಲಕ್ಷ್ಮಣ ರಾಠೋಡ, ಜಿಲ್ಲಾ ಪದಾಧಿಕಾರಿಗಳಾದ ಮರೆಪ್ಪ ನಾಯ್ಕೋಡಿ, ಚಂದ್ರಶೇಖರ್ ದೊಣ್ಣೆಗೌಡರ, ರುದ್ರಗೌಡ ಬಿರಾದರ್, ಶ್ಯಾಮ್ಯಲ್ ಕನ್ನಡಿ, ಸಿದ್ರಾಮಪ್ಪ ಅನ್ವಾರ್, ವಿಜಯಲಕ್ಷ್ಮಿ, ಭೀಮಾಶಂಕರ ದೊಡ್ಡಮನಿ, ಬಸರೆಡ್ಡಿ, ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!