ಯಾದಗಿರಿ ನಗರದಲ್ಲಿ ಶ್ರೀ ಮಾದರ ಚೆನ್ನಯ್ಯ ಸೇವಾ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ನಾದ್
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶ್ರೀ ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ದೇವಿಂದ್ರನಾಥ್ ನಾದ್ ಹೇಳಿದರು.
ನಗರದ ವಾರ್ಡ್ ನಂ. 25 ರ ವ್ಯಾಪ್ತಿಯ ವಿಶ್ವರಾಧ್ಯ ನಗರ ಈಶ್ವರ ದೇವಾಲಯದ ಹತ್ತಿರ ಶ್ರೀ ಮಾದರ ಚೆನ್ನಯ್ಯ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನು ಒಂದು ಸಸಿಯನ್ನು ನೆಟ್ಟು ಅದರ ಪೋಷಣೆ ಪಾಲನೆ ರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
ಪರಿಸರ ಸಮತೋಲನ ಕಾಪಾಡಲು ಮಳೆ ಬರಲು ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಒದಗಿಸುವುದು ಮರಗಳ ಮಹತ್ವವನ್ನು ವಿವರಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಹಣಮಂತ ಇಟಗಿ ಪ್ರಧಾನ ಕಾರ್ಯದರ್ಶಿಗಳಾದ ಡಾ ಶಿವಪ್ಪ ಮುದ್ನಾಳ ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಶೇಖರ್ ಕಡೆ ಸೂರ್ ಮಲ್ಲಿಕಾರ್ಜುನ್ ಬಬಲಾದಿ ಸಲೋಮನ್ ಯಡ್ಡಳ್ಳಿ ಮುಂತಾದವರು ಸೇವಾ ಸಮಿತಿ ಕಾರ್ಯಕರ್ತರು ಇದ್ದರು

