Oplus_0

ಬನ್ನೆಟ್ಟಿ-ಹುಳಂಡಗೇರಾ ಸೀಮೆಯಲ್ಲಿನ ಅನಧಿಕೃತ ಕೋಳಿ ಫಾರ್ಮ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗೆ ರೈತೋದಯ ಹಸಿರು ಸೇನೆ ಮನವಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಬನ್ನೆಟ್ಟಿ-ಹುಳಂಡಗೇರಾ ಸೀಮೆಯಲ್ಲಿ ಅನಧಿಕೃತವಾಗಿ ಕೋಳಿ ಫಾರ್ಮ್ ಮಾಡುತ್ತಿದ್ದು, ಕೂಡಲೇ ಸದರಿ ಕೋಳಿ ಫಾರ್ಮ್ ಬಂದ್ ಮಾಡಿಸುವಲ್ಲಿ ತಹಸೀಲ್ದಾರರು ವಿಳಂಭ ಮಾಡುತ್ತಿದ್ದು,  ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಹಾಗೂ ತಾಲೂಕು ಅಧ್ಯಕ್ಷ ಮಹೇಶ್ ಬನ್ನೆಟ್ಟಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ಬನ್ನೆಟ್ಟಿ-ಹುಳಂಡಗೇರಾ ಗ್ರಾಮದಲ್ಲಿ ಅನಧಿಕೃತವಾಗಿ ಯಾವುದೇ ಎನ್.ಎ. ಮಾಡದೇ, ಕೃಷಿ ಭೂಮಿಯಲ್ಲಿ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ /ಎನ್.ಒ.ಸಿ. ಪಡೆಯದೇ, ಆಂಧ್ರ ಮೂಲದ ವ್ಯಕ್ತಿ ಮೆ॥ ಸ್ನೇಹಾ ಫಾರ್ಮಸ್ ಮೂಲಕ ಕೋಳಿ ಫಾರ್ಮ್ ನಡೆಸುತ್ತಿದ್ದು, ಇದರಿಂದ ಗ್ರಾಮದಲ್ಲಿ ರೈತರಿಗೆ ಚಿಕನ್ ಗುನ್ಯಾ, ಹಕ್ಕಿ ಜ್ವರ, ಇತರೆ ಕಾಯಿಲೆಗಳಿಂದ ಜನರು ಬಳಲುಬಹುದು, ಪಕ್ಕದಲ್ಲಿ ಕೃಷಿ ಜಮೀನು ಇದ್ದು, ಕೆಟ್ಟ ವಾಸನೆಯಿಂದ ಕೂಲಿ ಕಾರ್ಮಿಕರು, ರೈತರ ಮೇಲೆ ದುಷ್ಪರಿಣಾಮ ಬೀರಿ, ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಸ್ನೇಹಾ ಫಾರ್ಮಸ್ ಸ್ಥಳೀಯರಿಗೆ ಇಲ್ಲಿ ಉದ್ಯೋಗ ನೀಡದೇ, ಕಾನೂನು ಬಾಹಿರವಾಗಿ ತೆಲಂಗಾಣ ರಾಜ್ಯದವರಿಗೆ ಕೆಲಸಕ್ಕೆ ತೆಗೆದುಕೊಂಡು, ಸ್ಥಳೀಯರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರರಿಗೆ ದೂರು ನೀಡಿದ್ದು, ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ನಿಷ್ಕಾಳಜಿತನ ತೋರಿದ್ದು, ಸ್ಥಳಕ್ಕೆ ಬಂದಿರುವುದಿಲ್ಲ, ಪರಿಶೀಲನೆ ಕೂಡಾ ಮಾಡಿರುವುದಿಲ್ಲ. ಬಂದ್ ಮಾಡಲು ಆಗುವುದಿಲ್ಲ ಸ್ವಚ್ಛತೆಗೆ ಮಾತ್ರ ಆದ್ಯತೆ ನೀಡುತ್ತೇವೆಂದು ಹೇಳಿರುತ್ತಾರೆ. ಈ ಬಗ್ಗೆ ದೂರಿಗೆ ಮಾನ್ಯತೆ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಆದಕಾರಣ ರೈತರ, ಕಾರ್ಮಿಕರ ಅನುಕೂಲಕ್ಕಾಗಿ ಬನ್ನೆಟ್ಟಿ-ಹುಳಂಡಗೇರಾ ಗ್ರಾಮದಲ್ಲಿ ಮೆ.ಸ್ನೇಹಾ ಫಾರ್ಮಸ್ ಇವರು ಸರ್ಕಾರದ ನಿಯಮ ಮೀರಿ, ಅನುಮತಿ ಪಡೆಯದೇ, ಕೋಳಿ ಫಾರ್ಮ್ ನಡೆಸಲು ಮುಂದಾಗಿದ್ದು, ಇವರಿಗೆ ಯಾವುದೇ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಸ್ನೇಹಾ ಫಾರ್ಮ ಬಂದ್ ಮಾಡದೇ ಹೋದಲ್ಲಿ ಮುಂದಿನ ದಿನ ಕಚೇರಿ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಶೆಟ್ಟಿ, ನಾಲವಾರ ಹೋಬಳಿ ಅಧ್ಯಕ್ಷ ನಿಂಗು ನಾಯ್ಕೋಡಿ, ಮಲ್ಲು ಹುಳಂಡಗೇರಾ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!