Oplus_0

ಚಿತ್ತಾಪುರ ತಹಸೀಲ್ದಾರ್ ಗೆ ಅಂಗವಿಕಲರ ಸಂಘದಿಂದ ಮನವಿ | ಸ್ಥಗಿತಗೊಂಡ ಮಾಸಾಶನಗಳು ಪ್ರಾರಂಭ ಮಾಡುವಂತೆ ಮಹ್ಮದ್ ಇಬ್ರಾಹಿಂ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ವೃದ್ಧಾಪ್ಯ ವೇತನ, ರಾಷ್ಟ್ರೀಯ ಭದ್ರತಾ ಯೋಜನೆ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ, ಮನಸ್ವಿನಿ ಯೋಜನೆಗಳ ಮಾಸಾಶನ ಕೂಡಲೇ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿ ತಾಲೂಕಾ ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ದೇಶ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಬುಧವಾರ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಮಾತನಾಡಿ, ವೃದ್ಧಾಪ್ಯ ವೇತನ, ರಾಷ್ಟ್ರೀಯ ಭದ್ರತಾ ಯೋಜನೆ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ, ಮನಸ್ಸಿನಿ ಯೋಜನೆಗಳ ಮಾಸಾಶನ ಸ್ಥಗಿತಗೊಂಡು ಐದು ತಿಂಗಳಾಗಿದೆ. ಇದರಿಂದ ಫಲಾನುಭವಿಗಳು ತಾಲೂಕು ತಹಸೀಲ್ ಕಚೇರಿಗೆ ಹಾಗೂ ಅಂಚೆ ಕಚೇರಿಗೆ ಅಲದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಪ್ರತಿ ತಿಂಗಳ ಮಾಸಾಶನ ಬರದೇ ಇರುವುದರಿಂದ ಫಲಾನುಭವಗಳ ಜೀವನ ನಡೆಸುವುದು ತುಂಬಾ ದುಸ್ತರವಾಗಿದೆ. ಯುಡಿಐಡಿ ಕಾರ್ಡ್ ಇದ್ದರೂ ಅಂಗವಿಕಲರಿಗೆ ಮಾಸಾಶನ ಬರುತ್ತಿಲ್ಲ, ಆದಾಯ ಪ್ರಮಾಣದಲ್ಲಿ 80 ಸಾವಿರ, 1 ಲಕ್ಷ ಮತ್ತು 1.20 ಸಾವಿರ ಹಾಕುತ್ತಿರುವುದರಿಂದ ಅರ್ಜಿ ಸ್ವೀಕಾರ ಮಾಡುತ್ತಿಲ್ಲ. ಇದರಿಂದ ರಿಜೆಕ್ಟ್ ಆಗುತ್ತದೆ, ಇದರಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.

ಅದ್ದರಿಂದ ಬಿಪಿಎಲ್ ಕಾರ್ಡ್ ಇದ್ದವರಿಗೆ 30 ಸಾವಿರ ಆದಾಯ ಹಾಕಿ ಆದಾಯ ಪ್ರಮಾಣ ಪತ್ರ ನೀಡಬೇಕು. ಆದಾಯ ಹೆಚ್ಚು ಹಾಕುತ್ತಿರುವುದರಿಂದ ಅರ್ಜಿಗಳು ತಗೊತ್ತಿಲ್ಲ ಇದರಿಂದ ಎರಡು ವರ್ಷಗಳಿಂದ ಅಲೆದಾಡುವಂತಾಗಿದೆ. ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ಸಹ ಅರ್ಜಿಗಳು ರೀಜಕ್ಟ್ ಆಗುತ್ತಿವೆ ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ಕ್ರಮ ಕೈಗೊಂಡು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಇತರೆ ರಾಜ್ಯಗಳಾದ ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ವೃದ್ಧಾಪ್ಯ ವೇತನ, ರಾಷ್ಟ್ರೀಯ ಭದ್ರತಾ ಯೋಜನೆ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲ ವೇತನ, ಮನಸ್ಸಿನಿ ಯೋಜನೆಗಳ ಮಾಸಾಶನ ಹೆಚ್ಚಾದಂತೆ ಕರ್ನಾಟಕ ರಾಜ್ಯದಲ್ಲಿ ಮಾಸಾಶನ ಹೆಚ್ಚಿಸಬೇಕು ಎಂದು  ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಗದೇವಪ್ಪ ಭಾಗೋಡಿ, ಚಂದ್ರು ಕಾಶಿ, ಮಲ್ಲಿಕಾರ್ಜುನ ನಾಲವಾರ, ಸಂತೋಷ ಕಟ್ಟಿ, ಕಿಶನ್ ತಾಂಡಾ, ಮಲ್ಲಿನಾಥ ಪಾಟೀಲ, ಕಲ್ಯಾಣಿ ಭೀಮಶಾ, ರವೀಂದ್ರ ತೇಲ್ಕೂರ್, ಸಾಬಣ್ಣ ಬಿಹರಪೇಟ್, ಮೋಗಲಪ್ಪ ಕುಂಬಾರ, ಈಶ್ವರ ಗೊಂಡಗೋ, ಅಂಜುಮ್ ಖಾಜಿ, ಮಂಜೂರು ಸಾಬ್, ಮಲ್ಲಿಕಾರ್ಜುನ ಮುಗುಳಕರ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!