ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ನಾಗಾವಿ ಎಕ್ಸಪ್ರೆಸ್
ವಾಡಿ: ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ಕಾಂಗ್ರೆಸ್ ಮುಖಂಡರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಟೌನ್ ಡೆವಲಪಮೆಂಟ್ ಕಮಿಟಿ ಅಧ್ಯಕ್ಷ ಅಮೃತ್ ಕೊಮಟೆ, ಉಪಾಧ್ಯಕ್ಷ ನಾಗೇಂದ್ರ ಜೈ ಗಂಗಾ, ಬಾಬುಮಿಯ್ಯಾ, ಸಾಲೋಮನ್ ರಾಜಣ್ಣ, ಸಂಜು ತಾನೇದಾರ್, ಬಸವರಾಜ್ ಮುತ್ತಗಿ, ಶಿವಕುಮಾರ್, ಡಾ.ಮೊಹ್ಮದ್ ಸೇರಿದಂತೆ ಇತರರು ಇದ್ದರು.

