ಮಳೆಗಾಗಿ ಪ್ರಾರ್ಥಿಸಿ ಮುಡಬೂಳ ಗ್ರಾಮದಿಂದ ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ಪಾದಯಾತ್ರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮುಡಬೂಳ ಗ್ರಾಮದಿಂದ ಚಿತ್ತಾಪುರ ಪಟ್ಟಣದ ನಾಗಾವಿ ಯಲ್ಲಮ್ಮ ದೇವಸ್ಥಾನದವರೆಗೆ ಮಳೆಗಾಗಿ ಪ್ರಾರ್ಥಿಸಿ ನೂರಾರು ಮಹಿಳೆಯರು ಬರಿಗಾಲಲ್ಲಿ ಮಂಗಳವಾರ ಪಾದಯಾತ್ರೆ ನಡೆಸಿದರು.
ಮಳೆಯ ಕೊರತೆಯಿಂದ ಸೋಯಾ, ತೊಗರಿ, ಉದ್ದು, ಹೆಸರು ಸೇರಿದಂತೆ ಇತರ ಬೆಳೆಗಳು ಒಣಗುತ್ತಿವೆ. ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ದೇವರನ್ನು ಪ್ರಾರ್ಥಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳೆಯರು ತಿಳಿಸಿದರು.
ಪಾದಯಾತ್ರೆ ಉದ್ದಕ್ಕೂ ಮಹಿಳೆಯರು ಭಕ್ತಿಗೀತೆಗಳು ಹಾಡುತ್ತಾ ಹೆಜ್ಜೆ ಹಾಕಿದರು. ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ತಲುಪಿದ ಮಹಿಳೆಯರು ಮಳೆಗಾಗಿ ದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

