ಸುಳ್ಳು ವಿಜೃಂಭಿಸಬಹುದು, ಆದರೆ ಸತ್ಯವನ್ನು ಅಳಿಸಲು ಸಾಧ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರ ತೇಜೋವಧೆಗೆ ಬಿಜೆಪಿ ಬಳಸಿದ ವಾಮಮಾರ್ಗಗಳು ಒಂದೆರಡಲ್ಲ, ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲದಿದ್ದರೂ, ಸುಳ್ಳು ಸೃಷ್ಟಿಸುವ ಅನಾಹುತಗಳು ಭೀಕರ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.
2ಜಿ ಸ್ಪೆಕ್ಟ್ರಂ ವಿಷಯದಲ್ಲಿ ಬಿಜೆಪಿ ಮಾಡಿದ ಆರೋಪಗಳು ನಿರಾಧಾರ ಎಂಬುದು ನ್ಯಾಯಾಲಯದಲ್ಲಿ ನಿರೂಪಿತವಾಗಿದ್ದು ಈಗ ಇತಿಹಾಸ, ಅಂತೆಯೇ ಕಲ್ಲಿದ್ದಲು ಹಂಚಿಕೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಬಿಜೆಪಿ ಹೊರಿಸಿದ್ದ ಆರೋಪದಲ್ಲೂ ಈಗ ಸತ್ಯದ ಅನಾವರಣವಾಗಿದೆ.
ದೇಶ ಕಂಡಂತಹ ಸುಶಿಕ್ಷಿತ, ಸಭ್ಯ ಹಾಗೂ ಸೌಮ್ಯ ಸ್ವಭಾವದ ಮನಮೋಹನ್ ಸಿಂಗ್ ಅವರ “ಪ್ರಾಮಾಣಿಕತೆ”ಗೆ ಬಿಜೆಪಿ ಇಟ್ಟಿದ್ದ ಕಪ್ಪು ಚುಕ್ಕೆಗೆ ಈಗ ಮುಕ್ತಿ ಸಿಕ್ಕಿದೆ. ಆದರೆ ಅವರಂತಹ ಮೇಧಾವಿ ಆಡಳಿತಗಾರರನ್ನು ಕಳೆದುಕೊಂಡ ದೇಶ ಈಗ ದುಷ್ಟರ ಪರಿಣಾಮಗಳನ್ನು ಎದುರಿಸುತ್ತಿದೆ.
ಬಿಜೆಪಿಗರು ಕಟ್ಟುವ ಸುಳ್ಳುಗಳ ಮಹಲು ಹೆಚ್ಚು ದಿನ ನಿಲ್ಲುವುದಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ ಎಂದು ತಿಳಿಸಿದ್ದಾರೆ.

