ಅಂಬೇಡ್ಕರ್ ಪುತ್ಥಳಿಯ ಸುತ್ತ ಕಾಂಪೌಂಡ್ ಕಾಮಗಾರಿಗೆ ಚಾಲನೆ | ಗುಣಮಟ್ಟದ ಕಾಮಗಾರಿ ಜೊತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಮುಖ್ಯಾಧಿಕಾರಿ ಭಾರತಿ ದಂಡೋತಿ ತಾಕೀತು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಯ ಕಾಂಪೌಂಡ್ ಹಾಗೂ ಇನ್ನಿತರ ಅಭಿವೃದ್ಧಿಯ ಕಾಮಗಾರಿಗಳು ಗುಣಮಟ್ಟದಲ್ಲಿ ಮಾಡುವ ಮೂಲಕ ನಿಗದಿಪಡಿಸಿದ ಅವಧಿಯಲ್ಲಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ತಾಕೀತು ಮಾಡಿದರು.
ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ನಗರೋತ್ಥಾನ ಫೇಸ್-4 ವಿಶೇಷ ಅನುದಾನ ಯೋಜನೆಯಡಿ ರೂ.50 ಲಕ್ಷ ರೂಪಾಯಿಯ ವೆಚ್ಚದಲ್ಲಿ ಕೈಗೊಂಡ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಯ ಸುತ್ತ ಕಾಂಪೌಂಡ್ ಹಾಗೂ ಇನ್ನಿತರ ಅಭಿವೃದ್ಧಿಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಸಜ್ಜಿತವಾಗಿ ಉತ್ತಮ ಹಾಗೂ ಬಹು ಸುಂದರವಾದ ಕಾಂಪೌಂಡ್ ನಿರ್ಮಿಸಬೇಕು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಬಿ.ಆರ್ ಅಂಬೇಡ್ಕರ ಪುತ್ಥಳಿಯ ನೂತನ ಕಾಂಪೌಂಡ್ ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆರವರಿಗೆ ನಾವು ಮನವಿ ಮಾಡಿರುವುದರಿಂದ ಅನುದಾನ ಕಲ್ಪಿಸಿದ್ದಾರೆ. ಈಗ ಇದ್ದ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಯು ಮುಂದೆ ಪೂರ್ಣ ಪ್ರಮಾಣದ ದೊಡ್ಡ ಪುತ್ಥಳಿಯ ಸ್ಥಾಪನೆಗೆ ಸಚಿವ ಪ್ರಿಯಾಂಕ್ ಖರ್ಗೆರವರಿಗೆ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಮಾಡಲಾಗುವುದು. ಆದ್ದರಿಂದ ಸುಸಜ್ಜಿತ ಕಾಂಪೌಂಡ್ ಹಾಗೂ ಇತರ ಕಾಮಗಾರಿಗಳು ಕಳಪೆಯಾಗದೇ ಗುಣಮಟ್ಟದಲ್ಲಿ ನಡೆಯಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ್ ಬೆಣ್ಣೂರಕರ್, ಪ್ರಮುಖರಾದ ಶ್ರೀಕಾಂತ್ ಸಿಂಧೆ, ಜಗನ್ನಾಥ್ ಮೂಡಬೂಳಕರ್, ದೇವಿಂದ್ರ ಕುಮಸಿ, ರಾಜಪ್ಪ ಹುಂಡೇಕರ್, ನಾಗು ಕಲ್ಲಕ್, ನಾಗೇಂದ್ರ ಬುರ್ಲಿ, ಮಲ್ಲಿಕಾರ್ಜುನ ಕಲ್ಮರಿ, ಬಸವರಾಜ್ ಮೂಡಬೂಳಕರ್, ಕಾರ್ತಿಕ್ ಕಲ್ಲಕ್, ಶಿವು ಆರಬೋಳ, ಪುರಸಭೆ ಜೆಇ ಭೀಮರಾವ್ ಪಾಟೀಲ, ಸಿಬ್ಬಂದಿಗಳಾದ ಲೋಹಿತ್ ಕಟ್ಟಿಮನಿ, ರಾಜಕುಮಾರ ಸೇರಿದಂತೆ ಇತರರಿದ್ದರು.

