Oplus_0

ಚಿತ್ತಾಪುರದಲ್ಲಿ ನಾಳೆ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ತುಲಾಭಾರ ಮತ್ತು ಆಶೀರ್ವಾದ ಸಮಾರಂಭ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ತೆಳಗೇರಿಯ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಆ.26 ರಂದು ಬೆಳಗ್ಗೆ 8.30 ಕ್ಕೆ ಗದಗ ಮತ್ತು ವಾರಣಾಸಿ ಬೂದೀಶ್ವರ ಸಂಸ್ಥಾನ ಮಠ ಅಂತೂರ-ಬೆಂತೂರ ಜಗದ್ಗುರು ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ತುಲಾಭಾರ ಮತ್ತು ಆಶೀರ್ವಾದ ಸಮಾರಂಭ ಆಯೋಜಿಸಲಾಗಿದೆ ಎಂದು ಮಲ್ಲಿಕಾರ್ಜುನ ದೇವಸ್ಥಾನ ಜಿರ್ಣೋದ್ದಾರ ಸಮಿತಿಯ ಬಸವರಾಜ ಕಾಳಗಿ, ಬಸವರಾಜ ಸಂಕನೂರ, ರಮೇಶ್ ಕಾಳನೂರ ಅವರು ತಿಳಿಸಿದ್ದಾರೆ.

60ನೇ ಮೌನಾನುಷ್ಠಾನ, 16ನೇ ಶಿವಯೋಗ ಸಮಾಧಿಯ ನಂತರ ಚಿತ್ತಾಪುರ ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಶ್ರೀಗಳಿಗೆ ತುಲಾಭಾರ ಮತ್ತು ಆರ್ಶೀವಚನ ಸಮಾರಂಭ ಹಮ್ಮಿಕೊಂಡಿದ್ದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಶ್ವಶಾಂತಿಗಾಗಿ 33 ದಿನಗಳ ನಿರ್ವಿಕಲ್ಪ ಶಿವಯೋಗ ಸಮಾಧಿ ತಪಸ್ಸು ಕೈಗೊಂಡು ಆಗಮಿಸತ್ತಿರುವ ಪರಮ ಪೂಜ್ಯರಿಗೆ ನಾಣ್ಯಗಳಿಂದ ತುಲಾಭಾರ ನೆರವೇರಿಸಿ, ಅವರಿಂದ ಭಕ್ತರಿಗೆ ಆಶೀರ್ವಾದ ಪಡೆಯುವ ಪುಣ್ಯ ಸಮಾರಂಭಕ್ಕೆ ಎಲ್ಲರೂ ಸಾಕ್ಷಿಯಾಗಬೇಕು ಎಂದು ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!