ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ | ಉಡಿ ತುಂಬುವ ಕಾರ್ಯಕ್ರಮ ಅಭಿವೃದ್ದಿಯ ಸಂಕೇತ: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಭಾರತೀಯ ಸಂಸ್ಕೃತೀಯಲ್ಲಿ ಮಹಿಳೆಯರನ್ನು ಪೂಜಿಸುವ ದೇಶವಾಗಿದೆ. ಮಹಿಳೆಯರಿಗೆ ಉಡಿತುಂಬುವುದು ದೇಶದ ಸಮಗ್ರ ಜನರ ಅಭಿವೃದ್ದಿಯ ಸಂಕೇತವಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.
ಪಟ್ಟಣದ ಶ್ರೀ ಶಿವಶಂಕರ ಮಠದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಗುರುಪಾದ ಪೂಜೆ ಕಾರ್ಯಕ್ರಮದಲ್ಲಿ ಶುಕ್ರವಾರ ರಾತ್ರಿ ನಡೆದ ವರಮಹಾಲಕ್ಷ್ಮೀ ವೈಭವ ಸಮಾರಂಭದಲ್ಲಿ ಮಹಿಳೆಯರಿಗೆ ಉಡಿ ತುಂಬುವ ವೈಭವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾಮಿಗಳ ಶಕ್ತಿಗಿಂತ ಮುತೈದಿ ಮಹಿಳೆಯರ ಶಕ್ತಿ ದೊಡ್ಡದು ಎಂದರು.
ಮಹಿಳೆಯರ ಕೈಯಲ್ಲಿ ಅಗಾಧವಾದ ಶಕ್ತಿಯಿದೆ. ದೇಶದಲ್ಲಿ ಶಾಂತಿ ನೆಮ್ಮದಿಯಿಂದ ಸಮೃದ್ದಿಗೊಂಡು ಪ್ರತಿಯೊಬ್ಬರ ಬದುಕು ಸುಂದರವಾಗಲಿ. ಮಳೆ ಬೆಳೆ ಉತ್ತಮ ಬೆಳೆದು ಪ್ರತಿಯೊಬ್ಬರ ಆರ್ಥಿಕ ಮಟ್ಟ ಸುದಾರಣೆಯಾಗಲಿ ಎಂದು ಮಹಿಳೆಯರು ಪ್ರಾರ್ಥಸಬೇಕೆಂದು ಹೇಳಿದರು.
ಗುರುವಿನ ಪಾದದಲ್ಲಿ ಅಪಾರ ಶಕ್ತಿಯಿದ್ದು, ಗುರುವಿನ ಸೇವೆ ಮಾಡುವುದರಿಂದ ಮನುಷ್ಯನಲ್ಲಿನ ಎಲ್ಲ ಪೀಡೆಗಳು ತೊಲಗುತ್ತವೆ ಎಂದು ಹೇಳಿದರು.
ತೆಲಂಗಾಣದ ಕೌಳಸ ಗ್ರಾಮದ ಹಿರೇಮಠದ ಒಡೆಯ ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಿತ್ತಾಪುರ-ಸೇಡಂ ಶ್ರೀ ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಕರಬಸಯ್ಯ ಶಾಸ್ತ್ರೀ, ಶಿವುಕುಮಾರ ಹಿರೇಮಠ ಮಂತ್ರ ಪಠಣ ಮಾಡಿದರು. ರೇಣುಕಾ ರಾಜು ಸಂಕನೂರ ದಂಪತಿಗಳು ಉಡಿ ತುಂಬುವ ಸೇವೆ ಸಲ್ಲಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ಮಲ್ಲಣ್ಣ ಮಾಸ್ತರ, ಶಿವಶರಣಪ್ಪ ರೇಷ್ಮಿ, ರವೀಂದ್ರ ಸಜ್ಜನಶೆಟ್ಟಿ, ವೀರಭದ್ರಪ್ಪ ಹುಮನಾಬಾದ, ಬಸವರಾಜ ಹೂಗಾರ, ಚಂದ್ರಶೇಖರ ಉಟಗೂರ, ಸೋಮಶೇಖರ ಯದಲಾಪುರ, ರಾಜಶೇಖರ ಬಳ್ಳಾ, ರವೀಂದ್ರ ಗೊಬ್ಬೂರ, ಮಹೇಶ ರೇಷ್ಢಿ, ಸಂಗಮೇಶ ರೋಣದ, ಬಸವರಾಜ ಸಂಕನೂರ, ಶರಣಗೌಡ ಮುದನೂರ, ವಾಸುದೇವ ಗಂಜಿ, ಮಹಾದೇವ ಅಂಗಡಿ, ದೇವಿಂದ್ರ ಸಜ್ಜನಶೆಟ್ಟಿ, ಶಿವುಕುಮಾರ ಗೊಬ್ಬೂರ, ಶರಣು ಸೂಲಹಳ್ಳಿ, ಮಲ್ಲಿಕಾರ್ಜುನ ಪಲ್ಲೇದ, ಅಂಬರೇಶ ಸುಲೇಗಾಂವ, ರಾಜಶೇಖರ ಮುಡಬೂಳ, ರಮೇಶ ಮತಕುಂಟಿ, ಬಸವರಾಜ ಬೊಮ್ಮನಳ್ಳಿ, ವೆಂಕಟಮ್ಮ ಪಾಲಪ್, ನಾಗಮ್ಮ ರೇಷ್ಮಿ, ಸರಸ್ವತಿ ರೇಷ್ಮಿ, ಮಂಜುಳಾ ಇಟಗಿ, ಸಂಗೀತಾ ಕೊಲ್ಲೂರ, ಭುವನೇಶ್ವರಿ ಸಿಂಪಿ, ಲಲಿತಾ ರೇಷ್ಮಿ, ಉಮಾದೇವಿ ಕೊಲ್ಲೂರ ಸೇರಿದಂತೆ ಇತರರಿದ್ದರು.

