Oplus_131072

ಜಿಲ್ಲಾಡಳಿತದ ನಿರ್ಲಕ್ಷ್ಯ ದೋರಣೆ ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಎಪಿಎಂಸಿಯಲ್ಲಿನ ರಾಜಸ್ಥಾನಿ ಸೇರಿ ಅನಧಿಕೃತ ಅಂಗಡಿಗಳು ತೆರವುಗೊಳಿಸಬೇಕು ಹಾಗೂ ನೋಟಿಸ್ ನೀಡಿ ಕೈಕಟ್ಟಿ ಕುಳಿತ ಎಪಿಎಂಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಅಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ 40ನೇ ಧಿನ ಮುಂದುವರೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದ ಎಪಿಎಂಸಿ ಅಧಿಕಾರಿಗಳು, ಜಿಲ್ಲಾಡಳಿತ, ಉಸ್ತುವಾರಿ ಸಚಿವರ ನಿರ್ಲಕ್ಷ ದೋರಣೆ ಖಂಡಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿ ಅದ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ ನಡೆಯಿತು.

ಎಪಿಎಂಸಿ ಅಧಿಕಾರಿಗಳು, ಜಿಲ್ಲಾಡಳಿತ ರಾಜಸ್ಥಾನಿಗಳ ಯಾವ ಮೂಲಾಜಿಗೆ ಬಿದ್ದು ಅವರ ಬೆಂಬಲಕ್ಕೆ ನಿಂತಿದೆ ಎಂಬುದು ಜಿಲ್ಲೆಯ ಜನತೆ ಪ್ರಶ್ನಿಸಬೇಕಾಗಿದೆ ಅಲ್ಲದೆ 40 ದಿನಗಳಿಂದ ಧರಣಿ ಕೂಳಿತಿದ್ದರೂ ಎಪಿಎಂಸಿ ಅಧಿಕಾರಿಗಳು ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಕ್ಯಾರೇ ಅನ್ನುತ್ತಿಲ್ಲ. ಈ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ ಎಂದು ಎಕೆ.ಎಸ್ ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ  ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಷ್ಮಿಕಾಂತ್ ಸ್ವಾಧಿ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂದೀಪ್ ಭರಣಿ, ಜಿ ಕೆ ಶಿವಾಜಿ,  ವಿನೋದ್ ಜನೆವರಿ, ನಾಗಣ್ಣ ಮುಜ್ಜಿ ( ಮಾಜಿ ಸೈನಿಕರು ) ಹುಚ್ಚೇಶ್ವರ ವಠಾರ, ಬಸವರಾಜ, ಮಹದೇವಿ ಹೇಳವರ್, ಸುನಿಲ್ ಶಿರ್ಕೆ, ದಶರಥ ಇಂಗೋಳೇ, ಚಿದಾನಂದ್ ಮಠಪತಿ, ಗಣೇಶ್ ಗಯ್ಯಾಳಿ, ಜ್ಯೋತಿ ಪಾಟೀಲ್, ಶರಣಮ್ಮ ಹೇಳವರ್, ಈರಮ್ಮ ಹೇಳವರ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!