ಆರೋಗ್ಯ ಇಲಾಖೆಯ ವರ್ಗಾವಣೆ ಸಮಸ್ಯೆಗಳು ಬಗೆಹರಿಸಲು ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಆರೋಗ್ಯ ಇಲಾಖೆಯ ವರ್ಗಾವಣೆ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ನೇತೃತ್ವದಲ್ಲಿ ನೌಕರರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರಿಗೆ ಜಿಲ್ಲೆಯಲ್ಲಿ ಲಭ್ಯವಿದ್ದ ಎಲ್ಲಾ ವೃಂದದ ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆಯಿಸಿ ಸ್ಥಳ ನಿಯುಕ್ತಿಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಸ್ವಾಗರ್ತಹವಾದದ್ದು, ಆದರೆ ಕಲಬುರಗಿ ಜಿಲ್ಲೆಯಲ್ಲಿ ಲಭ್ಯವಿದ್ದ ಎಲ್ಲಾ ವೃಂದದ ಖಾಲಿ ಹುದ್ದೆಗಳು ಕ್ರಿಟಿಕಲ್ ಮತ್ತು ನಾನ್ ಕ್ರಿಟಿಕಲ್ ಎಂದು ವಿಭಾಗಿಸಿದ್ದರಿಂದ ಕಲಬುರಗಿ ಜಿಲ್ಲೆಯಲ್ಲಿ ಖಾಲಿ ಹುದ್ದೆಗಳು ಲಭ್ಯವಿದ್ದರೂ ಕೂಡಾ ಕೌನ್ಸಿಲಿಂಗ್ ದಲ್ಲಿ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಬೇರೆ ಜಿಲ್ಲೆ/ ವಿಭಾಗಕ್ಕೆ ವರ್ಗಾವಣೆಯಾಗಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆಯ ನೌಕರರು ಮನವಿ ಮಾಡಿರುತ್ತಾರೆ. ಅದಕ್ಕಾಗಿ ಕ್ರಿಟಿಕಲ್ ಮತ್ತು ನಾನ್ ಕ್ರಿಟಿಕಲ್ ಎಂದು ಪರಿಗಣಿಸದೇ ಲಭ್ಯವಿದ್ದ ಎಲ್ಲಾ ವೃಂದದ ಖಾಲಿ ಹುದ್ದೆಗಳು ಕೌನ್ಸಿಲಿಂಗ್ ನಲ್ಲಿ ಪ್ರದರ್ಶಿಸಿ ಕಲಬುರಗಿ ಜಿಲ್ಲೆಯಲ್ಲಿರುವ ಲಭ್ಯವಿರುವ ಖಾಲಿ ಹುದ್ದೆಗಳಿಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಲು ತಾವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಪತ್ರ ರವಾನಿಸಬೇಕು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಮತ್ತು ನೌಕರರಾದ ಧರ್ಮರಾಯ ಜವಳಿ, ಎಂ.ಬಿ ಪಾಟೀಲ, ಚಂದ್ರಕಾಂತ ಏರಿ, ಗುರುಶರಣ, ಶರಣರಾಜ ಛಪ್ಪರಬಂದಿ, ಮಲ್ಲಿಕಾರ್ಜುನ ಶಿವಗಂಗಾ, ನಾಗೀಂದ್ರಪ್ಪ, ಶರಣು ಸೇರಿದಂತೆ ಇತರರು ಉಪಸ್ಥಿತರಿದ್ದರು.

