Oplus_0

ತರಕಸಪೇಟ ಕೆರೆಯ ಕೋಡಿ ಒಡೆದು ಹಾಳು ಮಾಡಿದವರನ್ನು ಗುರುತಿಸಿ ಕಾನೂನು ಕ್ರಮಕ್ಕೆ ಎಇಇ ದೂರು 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ತರಕಸಪೇಟ ಗ್ರಾಮದ ಸಣ್ಣ ನೀರಾವರಿ ಖಾನ ಟ್ಯಾಂಕ ತರಕಸಪೇಟ ಕೆರೆಯ ಕೋಡಿಯು ( waste weir) ಯಾರೋ ಒಡೆದು ಹಾಳುಮಾಡಿರುತ್ತಾರೆ ಹಾನಿ ಮಾಡಿದವರನ್ನು ಗುರುತಿಸಿ ಅವರ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಡಿ ಪೊಲೀಸ್ ಆರಕ್ಷಕ ಉಪ-ನಿರೀಕ್ಷಕರಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ, ಉಪ-ವಿಭಾಗ ಕಲಬುರಗಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ದೂರು ಸಲ್ಲಿಸಿದ್ದಾರೆ.

ಚಿತ್ತಾಪುರ ತಾಲೂಕಿನ ತರಕಸಪೇಟ ಗ್ರಾಮದ ಖಾನ ಟ್ಯಾಂಕ ತರಕಸಪೇಟ ಕೆರೆಯು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ-ವಿಭಾಗ ಕಲಬುರಗಿ ವ್ಯಾಪ್ತಿಯಲ್ಲಿದ್ದು ಸದರಿ ಕೆರೆಯು ಈ ವರ್ಷ ಹೆಚ್ಚಿನ ಮಳೆಯಿಂದ ಕೆರೆ ತುಂಬಿದ್ದು ಕೆರೆಯ ನೀರಿಂದ ಕೋಡಿ ಹರಿಯುತ್ತಿದೆ. ಆದರೆ ಯಾರೋ ಕಿಡಿಗೇಡಿಗಳು ರಾತ್ರಿ ಕೋಡಿ ಒಡೆದು ಹಾಕಿದ್ದು ತಿಳಿದು ಬಂದಿರುತ್ತದೆ. ಸದರಿ ಕೆರೆಯನ್ನು ಪರಿಶೀಲಿಸಲಾಗಿ, ಕೆರೆಯ ಕೋಡಿ ಒಡೆದಿದ್ದು ಕಂಡು ಬಂದಿರುತ್ತದೆ. ಆದ್ದರಿಂದ ಕೋಡಿ ಒಡೆದಿರುವರನ್ನು ಗುರುತಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!