Oplus_0

ಚಿತ್ತಾಪುರ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಹಿ ಹಂಡೆ ಒಡೆಯುವ ಕಾರ್ಯಕ್ರಮ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನಾಚರಣೆ ಅಂಗವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾಗೂ ದಹಿ ಹಂಡೆ ಒಡೆಯುವ ಕಾರ್ಯಕ್ರಮ ನಡೆಯಿತು.

ಪುರಸಭೆ ಸದಸ್ಯ ಶಾಮ ಮೇಧಾ ಮಾತನಾಡಿ, ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.

ಕಲಬುರಗಿ ಗ್ರಾಮಾಂತರ ಜಿಲ್ಲೆಯ ಕಾರ್ಯದರ್ಶಿ ಮಹಾದೇವ ಅಂಗಡಿ, ತಾಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಕಾರ್ಯದರ್ಶಿ ಸಾಬಣ್ಣ ಪೂಜಾರಿ, ಯಲ್ಲಪ್ಪ ಸುಲ್ತಾನಪುರ, ಯಲ್ಲಪ್ಪ ಪುಂಗಿ, ಸುಧೀರ ಬೆನಕನಹಳ್ಳಿ, ಮಲ್ಲಿಕಾರ್ಜುನ ಮುಗುಳನಾಗಾವಿ, ಜಿಲ್ಲಾ ಮಾತೃಶಕ್ತಿ ಪ್ರಮುಖರಾದ ಸುವರ್ಣ ಶಿಲ್ಪಿ, ವಿಜಯಲಕ್ಸ್ಮಿ ತುರೆ, ನಿರ್ಮಲ ಭಂಗಿ, ವಿಜಯಲಕ್ಷ್ಮೀ ಬಿರಾದಾರ, ಲಕ್ಷ್ಮೀ ಮಟ್ಟಿ, ಶೀಲಾ ದೊಡ್ಡಮನಿ, ಜ್ಯೋತಿ ಮುಗುಳೆ, ಶೀಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ಹಾಗೂ ಹೆಣ್ಣು ಮಕ್ಕಳಿಗೆ ರಾಧೆಯ ಅಲಂಕಾರ ಮಾಡಿ ಪಾಲಕರು ಸಂಭ್ರಮಿಸಿದರು. ನೃತ್ಯ ಮಾಡಿದ ಮತ್ತು ಕೃಷ್ಣ ರಾಧೆ ವೇಷಧಾರಿಗಳ ಮುದ್ದು ಮಕ್ಕಳಿಗೆ ಕೊನೆಯಲ್ಲಿ ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು. ಯುವಕರು ಮಾತೆಯರು ದಹಿ ಹಂಡೆ ಒಡೆಯುವ ಕಾರ್ಯಕ್ರಮ ನೆರವೇರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!