ಮಾಲಗತ್ತಿ ಗ್ರಾಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ 1.34 ಕೋಟಿ ಅನುದಾನ ಮಂಜೂರು, ರಾಷ್ಟ್ರೀಯ ಹೆದ್ದಾರಿ-ಮಾಲಗತ್ತಿ ರಸ್ತೆ ಕಾಮಗಾರಿ ಶೀಘ್ರದಲ್ಲೇ ಚಾಲನೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ತಾಲೂಕಿನ ಮಾಲಗತ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್- 150 ರಸ್ತೆಯವರೆಗೆ 2022-23ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾತಿ ಮಾಡಿಸಿದ್ದಾರೆ ಹೀಗಾಗಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಣ್ಣ ಅಲ್ಲೂರ ತಿಳಿಸಿದ್ದಾರೆ.
ನಾಗಾವಿ ಎಕ್ಸಪ್ರೆಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಟೆಂಡರ್ ಕಾಮಗಾರಿ ಕರೆಯಲಾಗಿದೆ. ಸುಮಾರು ಅಂದಾಜು ವೆಚ್ಚ 84 ಲಕ್ಷದ ಕಾಮಗಾರಿ ದಾವುದ್ ಅಲಿ ಕಾಂಟ್ರಾಕ್ಟರ್ ಇವರಿಗೆ ಟೆಂಡರ್ ಅಗ್ರಿಮೆಂಟ್ ಆಗಿರುತ್ತದೆ ಮತ್ತು ಮೇನ್ ರೋಡ್ 150 ದಿಂದ ಯರಗಲ್ ಗ್ರಾಮದವರೆಗೆ ಪ್ರಗತಿಪಥ ಯೋಜನೆ ಅಡಿಯಲ್ಲಿ ಮಂಜೂರಾಗಿರುತ್ತದೆ. ಈ ಕಾಮಗಾರಿ ಟೆಂಡರ್ ಕರೆಯಬೇಕಾಗಿದೆ. ಮಾಲಗತ್ತಿ ಸಾರ್ವಜನಿಕರು ರಸ್ತೆ ನಿರ್ಮಾಣಕ್ಕೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದ ಪ್ರಯುಕ್ತ ಸ್ಪಷ್ಟೀಕರಣ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಕಾಮಗಾರಿಗಳು ಮಂಜೂರು ಮಾಡಿರುತ್ತಾರೆ. ಆದ್ದರಿಂದ ಸಾರ್ವಜನಿಕರು ಕಾಮಗಾರಿ ಪ್ರಾರಂಭ ಮಾಡಲು ಸಹಕರಿಸಬೇಕಾಗಿ ಮನವಿ ಮಾಡಿದ್ದಾರೆ.
ಮಾಲಗತ್ತಿ ಗ್ರಾಮದಲ್ಲಿ 1 ಕೋಟಿ 34 ಲಕ್ಷ ರೂಪಾಯಿಗಳು ಕಾಮಗಾರಿಗಳು, ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಂಜೂರಾಗಿರುತ್ತದೆ ಹಾಗೂ ಎಎಸ್ಪಿ ಟಿಎಸ್ಪಿ 50 54 ಶಿರ್ಷಿಕೆ ಅಡಿಯಲ್ಲಿ 84 ಲಕ್ಷ ರೂಪಾಯಿಗಳು ಮಂಜುರಾತಿ ಆಗಿರುತ್ತದೆ ಕಾಮಗಾರಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

