ತಾಂಡಾ ಅಭಿವೃದ್ಧಿ ನಿಗಮದ ಎಂಡಿ ಮರಲಿಂಗಪ್ಪ ಅವರಿಗೆ ಬಂಜಾರ ಸಮಾಜದಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣಕ್ಕೆ ಇತ್ತೀಚಿಗೆ ಭೇಟಿ ನೀಡಿದ ತಾಂಡಾ ಅಭಿವೃದ್ಧಿ ನಿಗಮ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರಾದ ಮರಲಿಂಗಪ್ಪ ಹೊನಗುಂಟಿಕರ್ ಅವರಿಗೆ ವಾಡಿ ಪಟ್ಟಣದ ಬಂಜಾರ ಸಮಾಜದ ಮುಖಂಡರಾದ ಶ್ರೀರಾಮ ರಾಠೋಡ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಚವ್ಹಾಣ, ಆಕಾಶ ಚವ್ಹಾಣ, ಅಶೋಕ ನಾಯಕ, ರಾಮ ರಾಠೋಡ, ಅಜೇಯ ಚವ್ಹಾಣ, ಕೃಷ್ಣ ರಾಠೋಡ, ಮೋಹನ್ ರಾಠೋಡ ಸೇರಿದಂತೆ ಇತರರು ಇದ್ದರು.

