ಚಿತ್ತಾಪುರ ತಹಸೀಲ್ದಾರ್ ಗೆ ಮನವಿ | ಅತಿವೃಷ್ಟಿಯಿಂದ ಹಾನಿಯಾದ ರೈತರ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಲು ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಮಹಾ ಮಳೆಯಿಂದ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾದ ರೈತರಿಗೆ ಸರಕಾರದಿಂದ ಒಂದು ಎಕರೆಗೆ ರೂ. 25 ಸಾವಿರ ರೂಪಾಯಿಗಳು ಪರಿಹಾರ ಕೊಡಬೇಕು ಹಾಗೂ ರೈತರು ಬೆಳೆದ ಮುಂಗಾರು ಹೆಸರು, ಉದ್ದು, ಬೆಳೆಗಳು ಸರ್ಕಾರದಿಂದ ಯೋಗ್ಯ ಬೆಲೆಯಲ್ಲಿ ಖರೀದಿಸಬೇಕು ಎಂದು ಆಗ್ರಹಿಸಿ ಕರವೇ ನಾರಾಯಣಗೌಡ ಬಣ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ರೈತರು ಶುಕ್ರವಾರ ಪ್ರತಿಭಟಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ಕಳೆದ ಜುಲೈ, ಅಗಸ್ಟ್, ತಿಂಗಳಲ್ಲಿ ಸತತವಾಗಿ ಬಂದ ಮಳೆಯಿಂದ ಮುಂಗಾರು ಬೆಳೆಯನ್ನು ಸಂಪೂರ್ಣ ನಾಶವಾಗಿರುತ್ತದೆ. ಇದರಿಂದ ರೈತರು ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದರಿಂದ ಚಿತ್ತಾಪುರ ತಾಲೂಕಿನಲ್ಲಿ ಮಹಾ ಮಳೆಯಿಂದ ಅತಿವೃಷ್ಟಿಯಿಂದ ಹಾನಿಯಾಗಿದ್ದು ಸಮೀಕ್ಷೆ ಮಾಡಿ ಎಲ್ಲಾ ರೈತರಿಗೆ ಸರಕಾರದಿಂದ ಪ್ರತಿ ಎಕರೆಗೆ ರೂ. 25 ಸಾವಿರ ರೂಪಾಯಿಗಳು ಪರಿಹಾರ ಕೊಡಬೇಕು ಮತ್ತು ರೈತರು ಬೆಳೆದ ಮುಂಗಾರು ಬೆಳೆ ಹೆಸರು, ಉದ್ದು, ಸರ್ಕಾರದಿಂದ ಕೇಂದ್ರಗಳನ್ನು ರಚಿಸಿ ಯೋಗ್ಯ ಬೆಲೆಯಲ್ಲಿ ಖರೀದಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಗಣೇಶ ರಾಠೋಡ, ಶಿವರಾಮ ಚವ್ಹಾಣ, ವಿನೋದ ಚವ್ಹಾಣ, ಶರಣು ಹಾಸಬಾ, ಶೇರ್ ಅಲಿ, ಇಮ್ರಾನ್ ಸೇಟ್, ಶಿವುಕುಮಾರ ಗುತ್ತೇದಾರ, ರಾಜೇಶ್ ಗುತ್ತೇದಾರ, ಭೀಮರಾಯ ಕುಂಬಾರ, ಮೈನೋದ್ದಿನ್ ದಂಡೋತಿ, ಅಬ್ಬಾಸ್ ದಂಡೋತಿ, ಆಸೀಫ್ ಇವಣಿ, ಖದೀರ್ ಭಂಕಲಗಿ, ಅಯ್ಯುಬ್ ನಾಲವಾರ, ಖೇಮು ಹಣಮು, ಮಾಜೀದ್ ಅಡ್ಡೇವಾಲೆ, ಸಾಬಯ್ಯ ಗುತ್ತೇದಾರ, ಮೈನೋದ್ದಿನ್ ತಾಜನ್, ಆಕಾಶ್ ವಾಡಿ ಸೇರಿದಂತೆ ಇತರರು ಇದ್ದರು.

