ಚಿತ್ತಾಪುರ ಪ್ರಜಾ ಸೌಧದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪ್ರಜಾ ಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಸಿಡಿಪಿಓ ಆರತಿ ತುಪ್ಪದ್, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ನಾರಾಯಣ ಗುರು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಆನಂದ ರಾವೂರಕರ್, ಈಡಿಗ ಸಮಾಜದ ಮುಖಂಡರಾದ ಶಂಕರಗೌಡ ರಾವೂರಕರ್, ನಾಗಯ್ಯ ಗುತ್ತೇದಾರ ಕರದಾಳ, ವಿನೋದ ಗುತ್ತೇದಾರ, ಕಾಶಿನಾಥ ಗುತ್ತೇದಾರ, ದೇವಪ್ಪ ನಂದೂರಕರ್, ಕಾಶಿರಾಯ ಕಲಾಲ್, ನರಸಯ್ಯ ಗೌಡ, ನಾಗು ಮರಗೋಳ, ಆನಂದ ಗುತ್ತೇದಾರ, ಬಾಲರಾಜ್ ಕೊತ್ತಪಲ್ಲಿ, ಪಂಕಜ್ ಗೌಡ, ಅಂಬರೀಷ್ ಮರಗೋಳ, ರಕ್ಷಿತ್ ಮುಸ್ತಾಜರ್, ಯೋಗೇಶ್ ಬಿದರಚಡಿ, ಸಂತೋಷ ಸಂಕಲಾಪೂರ, ಅಂಜು ರಾವೂರಕರ್, ನಾಗೇಂದ್ರ ಇಟಗಿ, ಸಮರ್ಥ್ ಮುಸ್ತಾಜರ್, ನಾಗರಾಜ ಗೌಡ, ವಿಠಲ್ ರಾವ್ ಸೇರಿದಂತೆ ಇತರರು ಇದ್ದರು.

