Oplus_0

ಕಲಬುರಗಿ ಜಿಲ್ಲೆಯ ಅಭಿವೃದ್ದಿಗಾಗಿ ಕನ್ನಡ ಭೂಮಿ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಆನಂದ ತೆಗನೂರ ಸಿಎಂಗೆ ಮನವಿ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಜಿಲ್ಲೆಯು ತುಂಬಾ ಹಿಂದುಳಿದ ಪ್ರದೇಶವಾಗಿದ್ದು,ಇದಕ್ಕೆ ಈಗಾಗಲೇ 371 (ಜೆ) ಅಡಿಯಲ್ಲಿ ಮಾನ್ಯತೆ ನೀಡಿದ್ದು ಆದರೆ ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯವಾಗುತ್ತಿವೆ. ಈ ನಮ್ಮ ಜಿಲ್ಲೆಯ ಪ್ರಮುಖ ನಗರ, ಹಳ್ಳಿಗಳಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಸಂಚಾರಕ್ಕಾಗಿ ತುಂಬಾ ಪರದಾಡುತ್ತಿದ್ದಾರೆ ಹೀಗಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಆನಂದ ತೆಗನೂರ ಸಿಎಂ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

ರೈತರ ಜಮೀನುಗಳಿಗೆ ಹೋಗಿ ಬರುವುದಕ್ಕೆ ಸೂಕ್ತ ಕಲವರ್ಟಗಳು ಅಳವಡಿಸದೆ ಹಳ್ಳ ಕೊಳ್ಳ ಬಂದು ಸಂಪೂರ್ಣ ಜಮೀನುಗಳು ಹಾಳಾಗಿ ಹೋಗುತ್ತಿವೆ. ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಇದರಿಂದ ರೈತರ ಬೆಳಗಳ ಬೆಳವಣಿಗೆ ಕುಂಠಿತವಾಗುತ್ತಿವೆ. ಭಾರಿ ಮಳೆ ಬಂದರೆ ರೈತರು ಜಮೀನುಗಳಿ ಹೋಗಿ ಬರುವುದಕ್ಕೆ ರಸ್ತೆ ಸಂಪರ್ಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಪ್ರಮುಖ ನಗರಗಳಲ್ಲಿ ಸಹ ಪ್ರತಿಯೊಂದ ಒಣಿಯ ಬೀದಿಗಳಲ್ಲಿ ಒಂದಿಲ್ಲೊಂದು ನೆಪ ಮಾಡಿ ರಸ್ತೆಗಳು ಅಗೆದು ಹಾಗೇನೆ ಬಿಟ್ಟು ದೊಡ್ಡ ದೊಡ್ಡ ತಗ್ಗುಗಳೂ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಉದಾಹರಣೆ ಕಲಬುರಗಿ ನಗರದ ಹೃದಯ ಭಾಗವಾಗಿರುವ ಸುಪರ ಮಾರ್ಕೆಟ ಗಂಜ್ ನಗರೇಶ್ವರದಿಂದ ಜಗತ್ ವೃತ್ತದ ವರೆಗೆ ಹೋಗಬೇಕಾದರೆ  ಅಲ್ಲಲ್ಲಿ ರಸ್ತೆ ಅಗೆದಿರುವುದು ತುಂಬಾ ಎದ್ದು ಕಾಣುತ್ತಿದೆ ಎಂದು ಹೇಳಿದರು.

ದಿನೇ ದಿನೇ ಬೆಳೆಯುತ್ತಿರುವ ಕಲುಬರಗಿ ನಗರದಲ್ಲಿ ವಾಹನಗಳ ಓಡಾಟ ಸಾರ್ವಜನಿಕ ಓಡಾಟ ಹೆಚ್ಚಾಗಿ, ಜನಸಂದಣಿ (ಟ್ರಾಫಿಕ್ ಜಾಮ್) ಹೆಚ್ಚಾಗುತ್ತಿದ್ದು, ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಆದರೆ ನಮ್ಮ ಜಿಲ್ಲೆಯ ಅಧಿಕಾರಿಗಳು ಮಾತ್ರ ಇತ್ತ ಕಡೆ ಯಾವುದೇ ಗಮನ ಹರಿಸುತ್ತಿಲ್ಲ, ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತಿದೆ. ಇದಕ್ಕೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾಢಳಿತ ಪ್ರಮುಖ ಕಾರಣವಾಗಿದೆ. ಆದ್ದರಿಂದ ನಮ್ಮ ಭಾಗದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಿ ಕೂಡಲೇ ಈ ಕಾರ್ಯಗಳು ನೇರವೇರಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ

Spread the love

Leave a Reply

Your email address will not be published. Required fields are marked *

You missed

error: Content is protected !!