Oplus_0

ನಾಳೆ ಶಾಲಾ ಸಮಯ ಬದಲಾವಣೆ ಮಾಡಿ ಆದೇಶ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢ, ಶಾಲೆಗಳು ಹಾಗೂ ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ, ವಿಶೇಷ ದಿನವಾದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಸೆ.17 ರಂದು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಬೆಳಿಗ್ಗೆ 7.30 ಕ್ಕೆ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ ನಡೆಸುವುದು, ಹಾಗೂ ಬೆಳಿಗ್ಗೆ 8 ಗಂಟೆಯಿಂದ 1.30 ರವರೆಗೆ ಶಾಲೆಯ ಸಮಯ ಬದಲಾವಣೆ ಮಾಡಿ ಕಲಬುರಗಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅವರು ಮಂಗಳವಾರ ಆದೇಶಿಸಿದ್ದಾರೆ.

ಸೆ.17 ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಬೆಳಿಗ್ಗೆ ಧ್ವಜಾರೋಹಣ ಮಾಡಬೇಕಾಗಿರುತ್ತದೆ. ದೂರದಿಂದ/ಹಳ್ಳಿಗಳಿಂದ ಶಾಲೆಗೆ ಬರುವ ಮಕ್ಕಳು ಬೆಳಿಗ್ಗೆ 7.30 ಕ್ಕೆ ಶಾಲೆಗೆ ಬಂದು ಧ್ವಜಾರೋಹಣ ಮುಗಿಸಿದ ನಂತರ ಪುನ: 10 ಗಂಟೆಗೆ ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ಸಮಯ ಪಾಲನೆ ಮಾಡುವಲ್ಲಿ ಆಸ್ಥ ವ್ಯಸ್ಥತೆಯಾಗುವ ಸಾದ್ಯತೆ ಇರುವುದರಿಂದ ಶಾಲಾ ಸಮಯ ಬದಲಾವಣೆ ಮಾಡಬೇಕು ಎಂದು ಪ್ರೌಢ ಶಾಲಾ ಜಿಲ್ಲಾ ಅಧ್ಯಕ್ಷರು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಮನವಿ ಪತ್ರ ಸಲ್ಲಿಸಲಾಗಿತ್ತು. ಇದರಿಂದ ಉಪನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!