ಯಾದಗಿರಿ ಬಾಲಯೋಗಿ ಶ್ರೀ ರಾಜೇಂದ್ರ ಮಹಾರಾಜರ ಜನ್ಮ ದಿನಾಚರಣೆ, ಅನ್ನ ಸಂತರ್ಪಣೆ 

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ನಗರದ ಗಂಜ್ ಪ್ರದೇಶದಲ್ಲಿರುವ ಬಾಲಯೋಗಿ ಶ್ರೀ ರಾಜೇಂದ್ರ ಮಹಾರಾಜರ 93 ನೇ ಜನುಮಾದಿನದ ಸಂಭ್ರಮ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ರಾಜೇಂದ್ರ ಮಹಾರಾಜರ ಆಶ್ರಮದಲ್ಲಿ ಶ್ರೀ ಭೀಮಾಶಂಕರ್ ಮಹಾರಾಜರ ಹಾಗೂ ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರಕುಮಾರ್ ಅನಪುರ್ ನೇತೃತ್ವದಲ್ಲಿ ನಡೆಯಿತು.

ಬೆಳಗ್ಗೆ 11.30 ಕ್ಕೆ ಪೂಜೆ ಪುನಸ್ಕಾರಗಳನ್ನು ಮಾಡಿ ಬಂದಂತಹ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಮಹೇಂದ್ರ ಗೌಡ ಅಳ್ಳೋಳ್ಳಿ, ನಾಗರಾಜ್ ಗೌಡ ಮಾನಸಗಲ್, ದೇವಪ್ಪ ಗೌಡ ರಾಚನಳ್ಳಿ, ಸೂರ್ಯಕಾಂತ ಗೌಡ ಯರಗೋಳ್, ಯಾದಗಿರಿ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ ಕಲಾಲ್, ಕಾಶಪ್ಪ ಮುಸ್ತೂರ್, ನಂದುಕುಮಾರ್ ಜಲಾಲ್ಪುರ್, ಬಾಲಾಜಿ ಪೊಲೀಸ್, ಮಲ್ಲಿಕಾರ್ಜುನ್ ಶಾಬಾದಿ, ಮರಿಯಪ್ಪ ಇಬ್ರಾಹಿಂಪುರ್, ಮಂಜುನಾಥ್ ಸುಂಕಾಪುರ್,ಮಂಜುನಾಥ್ ಮುಸ್ತೂರ್, ನರೇಂದ್ರ ಶಾಬಾದಿ, ದತ್ತಾತ್ರೇಯ ಶಾಬಾದಿ, ರಾಜೇಶ್ ಅಡಗೋಳ್, ಶರಣು ಮಳ್ಳಳಿ, ಗುರುರಾಜ ಶಾಬಾದಿ, ಸುರೇಶ್ ಕೊಲಂಪಲ್ಲಿ ಹಾಗೂ ಸಮಾಜದ ಇನ್ನಿತರ ಮುಖಂಡರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!