ಕಾಳಗಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಪ್ರಾರಂಭ | ಜ.3 ಕ್ಕೆ ವೈಭವದ ರಥೋತ್ಸವ, ಜ 4 ಕ್ಕೆ ವಿಶೇಷ ಪಲ್ಲಕ್ಕಿ ಉತ್ಸವ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಪಟ್ಟಣದ ಆರಾಧ್ಯ ದೇವತೆಯಾದ ಜಗನ್ಮಾತೆ ತಾಯಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಜ. 3 ಕ್ಕೆ ವೈಭವದ ರಥೋತ್ಸವ ಹಾಗೂ ಜ.4 ಕ್ಕೆ ವಿಶೇಷ ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಗಣೇಶ ಸಿಂಗಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ. 28 ಭಾನುವಾರ ದಿಪೋತ್ಸವ, ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ಡಿ. 29 ದಿಂದ ಜ. 2 ರವರೆಗೆ ಪ್ರತಿದಿನ ಸಾಯಂಕಾಲ 8 ಗಂಟೆಯಿಂದ ಪ್ರವಚನ ಕಾರ್ಯಕ್ರಮ, ಡಿ. 30 ರಿಂದ ಜ. 2 ವರೆಗೆ ಗಂಗಸ್ಥಳದೊಂದಿಗೆ ನಿತ್ಯ ಪಲ್ಲಕ್ಕಿ ಉತ್ಸವ, ಜ 3 ಶನಿವಾರ ಬೆಳಿಗ್ಗೆ 6 ಗಂಟೆಗೆ ದೇವಿಯ ಮಹಾಭಿಷೇಕ, ಸಾಯಂಕಾಲ 6 ಗಂಟೆಗೆ ವೈಭವದ ರಥೋತ್ಸವ ಜರುಗಲಿದೆ. ಜ. 4 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರಿಗೆ ವಿಶೇಷ ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದ ನಿಮಿತ್ಯ ಪ್ರವಚನ ಕಾರ್ಯಕ್ರಮ ಜರುಗಲಿದ್ದು ಹರಗುರು ಚರಮೂರ್ತಿಗಳು, ರಾಜಕೀಯ ಗಣ್ಯರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬನಶಂಕರಿ ದೇವಿ ಜಾತ್ರಾ ಸಮಿತಿ ತಿಳಿಸಿದೆ.

