Oplus_0

ಚಿತ್ತಾಪುರದಲ್ಲಿ ಶ್ರೀ ಗುಡ್ಡಾಪೂರ ಧಾನಮ್ಮ ದೇವಿಯ ಪೂರಾಣ ಪ್ರಾರಂಭ | ಶರಣ ಶರಣೆಯರ ತತ್ವಸಿದ್ಧಾಂತಗಳು ಜೀವನದಲ್ಲಿ ಅಳವಡಿಸಿಕೊಳ್ಳಿ: ನಾಗರೆಡ್ಡಿ ಪಾಟೀಲ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಶರಣ ಶರಣೆಯರ ತತ್ವಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಶ್ವಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.

ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯ ಆವರಣದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್  ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಗುಡ್ಡಾಪೂರ ಧಾನಮ್ಮ ದೇವಿಯ ಪೂರಾಣ ಕಾರ್ಯಕ್ರಮ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಮತ್ತು ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಕಾಲದಲ್ಲಿ ಶರಣ ಶರಣೆಯರು ಆಗದಿದ್ದರೂ ಪರವಾಗಿಲ್ಲ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿವರ್ತನೆಯಾಗಬೇಕು ಎಂದು ಹೇಳಿದರು.

12 ಪೇ ಶತಮಾನದಲ್ಲಿ ಶರಣ ಶರಣೆಯರು ಹುಟ್ಟಿದ್ದಾರೆ ಆದರೆ ನಂತರದ ದಿನಗಳಲ್ಲಿ ಶರಣ ಶರಣೆಯರು ಜನ್ಮ ತಾಳಿಲ್ಲ ಯಾಕೆ ಎನ್ನುವುದು ಪ್ರಶ್ನೆಯಾಗಿದೆ ಎಂದರು.

ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು, ಬೆಳಗುಂಪಾ ಶ್ರೀ ಪರ್ವತೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್, ಉದ್ಯಮಿ ಚಂದ್ರಶೇಖರ ಸಾತನೂರು, ಬ್ಯಾಡ್ಮಿಂಟನ್ ಅಸೋಸಿಯೇಷನ್ ಉಪಾಧ್ಯಕ್ಷ ಸಂತೋಷ ಕಲಾಲ್, ಕಾರ್ಯದರ್ಶಿ ಬಾಬು ಕಾಶಿ, ಪತ್ರಕರ್ತರಾದ ವಿರೇಂದ್ರ ಕೊಲ್ಲೂರು, ಕಾಶಿನಾಥ ಗುತ್ತೇದಾರ, ಜಗದೇವ ಕುಂಬಾರ, ಆನಂದ ರೆಡ್ಡಿ, ಚಂದ್ರಶೇಖರ ಬಳ್ಳಾ, ನಜೀರ್ ಆಡಕಿ, ಪ್ರೀತಿ ಸೂರ್ಯವಂಶಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಬಸವರಾಜ ರಾಜೋಳ್ಳಿ, ಸುರೇಶ ಮತಕುಂಟಿ, ಮಹಾದೇವ ಕಾಳಗಿ, ರಾಚಣ್ಣ ಕಾಳಗಿ, ರಾಚಣ್ಣ ವೈಕುಂಠ, ಶಿವಕುಮಾರ ಶೀಲವಂತ ನಾಗರಾಜ ಕೊಳ್ಳಿ, ಹಂಪಯ್ಯ ಆರಿ, ಮಲ್ಲಿಕಾರ್ಜುನ ಅಲ್ಲಂ, ರಮೇಶ ಶಿರ್ಪಾ, ಚನ್ನಪ್ಪ ಕೊಡ್ಲಿ, ರಾಘವೇಂದ್ರ ಗಂಜಿ, ಅಶೋಕ ಶೀಲವಂತ, ವಾಸುದೇವ, ಗಂಜಿ, ಗುಂಡಪ್ಪ ಅಲ್ಲಂ, ರಮೇಶ ಮತಕುಂಟಿ, ಶಿವರಾಜ ವೈಕುಂಠ, ರಾಜಶೇಖರ ಶಿರ್ಪಾ, ವಿಶ್ವನಾಥ ಅಲ್ಲಂ, ಅಯ್ಯಪ್ಪ ಗುರುಮಿಠಕಲ್, ಗುರಣ್ಣ ದಂಡೋತಿ, ಶಿವಕುಮಾರ ಶಿರ್ಪಾ, ಸಂಗಮನಾಥ ವಚ್ಚಾ, ರೇವಣು ಕೊಳ್ಳಿ, ಮಹಾದೇವ ಬೇಲಿ, ಅನೀಲ ಷಣ್ಮುಖ, ರೇವಣಸಿದ್ದ ಗಂಜಿ,  ರಾಜಶೇಖರ ಮತ್ತಕುಂಟಿ, ಬಸವರಾಜ ಮಿಣಜಗಿ, ಶಿವಕುಮಾರ ಗಂಜಿ, ರವಿ ಶಿರ್ಪಾ, ಶಿವಕುಮಾರ ಮಾಡಿಗಿ, ಮಂಜುನಾಥ ಶಾಸ್ತ್ರಿ ಸೇರಿದಂತೆ ಇತರರು ಇದ್ದರು. ಶೃತಿ ತಾವರೆ ಪ್ರಾರ್ಥಿಸಿದರು, ಉಪಾಧ್ಯಕ್ಷ ರಾಜಶೇಖರ ಬಳ್ಳಾ ನಿರೂಪಿಸಿದರು.

ಗದಗ ಶ್ರೀ ವಿರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಶಾಸ್ತ್ರೀಗಳು ಪ್ರವಚನ ನೀಡಿದರು, ಗವಾಯಿ ಕಲ್ಯಾಣಕುಮಾರ್, ಶಿವುಕುಮಾರ ಕಟ್ಟಿಸಂಗಾವಿ ತಬಲಾ ಸೇವೆ ಸಲ್ಲಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!