Oplus_0

ಚಿತ್ತಾಪುರ ಹಳೆಯ ತಹಸೀಲ್ ಕಚೇರಿಯಲ್ಲಿನ ಎರಡು ಕೋಣೆಗಳು ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರೇವಣಸಿದ್ದಪ್ಪ ರೋಣದ್ ಮನವಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪೂರ: ಪಟ್ಟಣದಲ್ಲಿರುವ ಹಳೆಯ ತಹಸೀಲ್ ಕಾರ್ಯಾಲಯದ ಉಪ ಖಜಾನೆ ಅಥವಾ ಅದೇ ಕಟ್ಟಡದಲ್ಲಿ ಯಾವುದಾದರೂ 2 ಕೋಣೆಗಳು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭಾನುವಾರ ಮನವಿ ಪತ್ರ ಸಲ್ಲಿಸಿದರು.

ಚಿತ್ತಾಪುರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವಿದ್ದು. ನಿವೃತ್ತ ಸರ್ಕಾರಿ ನೌಕರರ ಸಮಸ್ಯೆಗಳು ಹಾಗೂ ಸಮಾಜಿಕ ಸುಧಾರಣೆಗಳ ಬಗ್ಗೆ ಚರ್ಚಿಸಲು ಸ್ಥಳ ಇಲ್ಲದ ಕಾರಣ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ಚಿತ್ತಾಪುರ ಪಟ್ಟಣದಲ್ಲಿ ಹೊಸದಾಗಿ ಪ್ರಜಾ ಸೌಧ ನಿರ್ಮಾಣ ಮಾಡಿದ ಕಾರಣ ಹಳೆಯ ತಹಸೀಲ್ ಕಚೇರಿ ಖಾಲಿ ಇರುತ್ತದೆ. ಹೀಗಾಗಿ ಹಳೆ ತಹಸೀಲ್ ಕಚೇರಿಯ ಉಪ ಖಜಾನೆ ಅಥವಾ ಅದೇ ಕಟ್ಟಡದಲ್ಲಿ ಖಾಲಿ ಇರುವ 2 ಕೋಣೆಗಳನ್ನು ನಮ್ಮ ಸಂಘಕ್ಕೆ ಮಂಜೂರಿ ಮಾಡಿ ನಮ್ಮ ಸಂಘದ ಕಾರ್ಯಚಟುವಟಿಕೆಗಳನ್ನು ಮಾಡಲು ಅನುಕೂಲ ಮಾಡಿಕೊಟ್ಟು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ ಪ್ರದಾನ ಕಾರ್ಯದರ್ಶಿ ಶಶಿಧರ.ಎಸ್.ಪಾಟೀಲ ಅವರು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!