ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ಯುವಕರು | ಚಿತ್ತಾಪುರದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯ ಭವ್ಯ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಕೋಲಿ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ 906 ನೇ ಜಯಂತ್ಯೋತ್ಸವದ ನಿಮಿತ್ತ ಚಿತ್ತಾಪುರ ಪಟ್ಟಣದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯ ಭವ್ಯ ಮೆರವಣಿಗೆ ಗುರುವಾರ ರಾತ್ರಿ ನಡೆಯಿತು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಿಂದ ಪ್ರಾರಂಭವಾದ ಅಂಬಿಗರ ಚೌಡಯ್ಯನವರ ಮೂರ್ತಿಯ ಭವ್ಯ ಮೆರವಣಿಗೆ ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಲಾಡ್ಜಿಂಗ್ ಕಾಸ್ ಹತ್ತಿರ ಕೊನೆಗೊಂಡಿತ್ತು.
ಮೆರವಣಿಗೆ ಉದ್ದಕ್ಕೂ ಡಿಜೆ ಸೌಂಡ್‌ಗೆ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ವಿಶೇಷವಾಗಿ ಏಳು ಫೀಟ್ ಉದ್ದದ ಅಂಬಿಗರ ಚೌಡಯ್ಯನವರ ಮೂರ್ತಿ ಎಲ್ಲರಿಗೂ ಆಕರ್ಷಿಸಿತು.
ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮೆರವಣಿಗೆಗೆ ಚಾಲನೆ ನೀಡಿದರು. ಕೋಲಿ ಸಮಾಜದ ತಾಲೂಕು ಯುವ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ನೇತೃತ್ವದಲ್ಲಿ ನಡೆದ ಮೆರವಣಿಗೆಗೆ ಯುವಕರು ಸಾತ್ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಡಾ.ಫಾರುಕ್ ಮನೂರ್, ಪಿಎಸ್ಐ ಮಂಜುನಾಥ ರೆಡ್ಡಿ, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಪಂಚ ಗ್ಯಾರಂಟಿ ಸದಸ್ಯ ಶರಣು ಡೋಣಗಾಂವ, ಕಾಂಗ್ರೆಸ್ ಯುವ ಅಧ್ಯಕ್ಷ ದೇವು ಯಾಬಾಳ, ಮುಖಂಡರಾದ ಶರಣು ಸಿದ್ರಾಮಗೋಳ, ಭೀಮರಾಯ ಹೊತಿನಮಡಿ, ಲಕ್ಷ್ಮೀಕಾಂತ ಸಾಲಿ, ಕರಣಕುಮಾರ್ ಅಲ್ಲೂರ, ಸಾಬಣ್ಣ ಹೋಳಿಕಟ್ಟಿ, ವಿಶ್ವನಾಥ ಸಾಲಿ, ಭೀಮಾಶಂಕರ ಹೋಳಿಕಟ್ಟಿ, ಗೂಳಿ ಡಿಗ್ಗಿ, ಗಂಗಾಧರ ಡಿಗ್ಗಿ, ರಾಜಾಹುಲಿ, ರೇಖಾ ತಳವಾರ, ನಾಗೇಂದ್ರ ಚಪಟ್ಲಾ, ದತ್ತು ಮೈನಾಳಕರ್, ಭಾಗಣ್ಣ ಹಲಕಟ್ಟಿ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.

