Oplus_0

ಚಿತ್ತಾಪುರದಲ್ಲಿ ಅದ್ದೂರಿ ಹಿಂದೂ ಸಮಾವೇಶ, ಶೋಭಾಯಾತ್ರೆ | ಜಗತ್ತನ್ನೇ ಗೆಲ್ಲುವ ಶಕ್ತಿ ಹಿಂದೂಗಳಿಗಿದೆ: ರಘುನಂದನ್ ಜೀ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಹಿಂದುಗಳಲ್ಲಿ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯವಿದೆ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ್ ಜೀ ಎಂದು ಹೇಳಿದರು.

ಪಟ್ಟಣದ ವರುಣ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಸಮಾವೇಶ ಆಯೋಜನಾ ಸಮಿತಿ ವತಿಯಿಂದ ಶನಿವಾರ ಸಂಜೆ ನಡೆದ ಹಿಂದೂ ಸಮ್ಮೇಳನ’ದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದ ಅವರು, ನಮ್ಮ ಶಕ್ತಿಯ ಬಗ್ಗೆ ನಮಗೆ ಅರಿವಿಲ್ಲ. ಪರಕೀಯರ ದಾಳಿಗಿಂತ ನಮ್ಮಲ್ಲಿನ ಅಸಂಘಟಿತ ಸ್ಥಿತಿಯೇ ನಮಗೆ ದೊಡ್ಡ ಶತ್ರುವಾಗಿ ವರಿಣಮಿಸಿದೆ. ಪ್ರತಿಯೊಬ್ಬ ಹಿಂದೂ ತನ್ನ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುತ್ತಿರುವ ಮತಾಂತರದಂತಹ ಕೃತ್ಯಗಳನ್ನು ತಡೆಯಲು ಪ್ರತಿಯೊಂದು ಮನೆಯೂ ಒಂದು ಶಕ್ತಿ ಕೇಂದ್ರವಾಗಬೇಕು ಎಂದು ಹೇಳಿದರು.

ಹಿಂದುಗಳು ಸಾಂಸ್ಕೃತಿಕ ಸ್ವಾಭಿಮಾನ ಬೆಳೆಸಿಕೊಳ್ಳ ಬೇಕು. ಮತಾಂತರದಂತಹ ಸಮಾಜವಿರೋಧಿ ಕೃತ್ಯಗಳನ್ನು ಸಂಘಟಿತವಾಗಿ ತಡೆಯಬೇಕು. ಪರಿಸರ ರಕ್ಷಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದೇ ನಿಜವಾದ ಧರ್ಮ ಎಂದರು.

ಸಾನಿಧ್ಯ ವಹಿಸಿದ್ದ ಬೆಳಗುಂಪಾ ಶ್ರೀ ಅಭಿನವ ವರ್ವತೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಯುವಜನತೆ ದುಶ್ಚಟಗಳನ್ನು ಬಿಟ್ಟು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು. ವಿದೇಶಿಯರು ನಮ್ಮ ಧರ್ಮ ಗ್ರಂಥಗಳು ಅಧ್ಯಯನ ಮಾಡಿ ಸಾಕಷ್ಟು ಅಭ್ಯುದಯ ಹೊಂದಿದ್ದಾರೆ. ಮಾನಸಿಕ ಚಿಕಿತ್ಸೆಗಾಗಿ ಓಂಕಾರ ಮಂತ್ರ ಹೇಳಿ ಕೊಡುವರು ಎಲ್ಲರೂ ಗಾಯತ್ರಿ ಮಂತ್ರ, ಹನುಮಾನ ಚಾಲೀಸ್ ಪಂಚಾಕ್ಷರಿ ಮಂತ್ರ ಪಠಿಸಬೇಕು ಎಂದರು.

ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಂಸ್ಕಾರ ಮೈಗೂಡಿಸಿಕೊಂಡು ಸಂಸ್ಕೃತಿ ಕಾಪಾಡುತ್ತಾ ಆಗಾಗ ಸಿಂಹಾವಲೋಕನ ಮಾಡಿಕೊಳ್ಳಬೇಕು, ಸ್ವಧರ್ಮ ನಿಷ್ಠೆ ಜತೆ ವರಧರ್ಮ ಸಹಿಷ್ಣುತೆ ಬೆಳೆಸಿಕೊಳ್ಳಬೇಕು ಆಗ ರಾಮರಾಜ್ಯ ಕನಸು ಸಾಕಾರಗೊಳ್ಳುವುದು ಎಂದರು.

ಸಮಿತಿ ಅಧ್ಯಕ್ಷ ಉಮೇಶಬಾಬು ಸಾಸಬಾಳ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ತುಕಾರಾಮ ನಾಯಕ ರಾಠೋಡ, ಕಾರ್ಯಾಧ್ಯಕ್ಷ ಸತ್ಯನಾರಾಯಣ ಯಾದವ್, ಮಾರುತಿ ಮುಗುಳಕರ್ ಅವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಾಬಣ್ಣ ಮಡಿವಾಳ್‌, ಬಸವರಾಜ ಹೂಗಾರ, ಗಿರೀಶ್ ಭಜಂತ್ರಿ, ವೀರಣ್ಣ ಶಿಲ್ಪಿ, ಅಶೋಕ ಹಡಪದ, ಆನಂದ ಪಾಟೀಲ ನರಿಬೋಳಿ, ಕೋಟೇಶ್ವರ ರೇಷ್ಮೆ, ಮಹಾದೇವಪ್ಪ ಉಪ್ಪಾರ, ನಾಗರಾಜ ರಾವೂರಕರ್, ದೇವಾನಂದ ತ್ರಿಮಲ್, ಯಮನಪ್ಪ ಬೋಸಗಿ, ಮುನಿ ಕಡಬೂರ್, ಬಸವರಾಜ ಪೂಜಾರಿ, ಅನಿಲ್ ಯೆಂದೆ, ಅಶೋಕ ಬಗಲಿ, ಬಸವರಾಜ ಬೆಣ್ಣೂರಕರ್, ರವೀಂದ್ರ ಸಜ್ಜನಶೆಟ್ಟಿ, ನಾಗರಾಜ ಹೂಗಾರ, ಲಿಂಗರಾಜ ಬಿರಾದಾರ, ಶ್ರೀನಿವಾಸ ಹಳ್ಳಿ, ಅಯ್ಯಪ್ಪ ರಾಮತೀರ್ಥ, ಮಲ್ಲಣ್ಣ ಮಾಸ್ಟರ್ ಮೂಡಬೂಳ, ಬಸವರಾಜ ಸಂಕನೂರ್, ರಾಚಣ್ಣ ಕಾಳಗಿ, ಬಸವರಾಜ ರಾಜೋಳ್ಳಿ, ರವಿ ಕುಲಕರ್ಣಿ, ಶ್ರೀಕಾಂತ ಜಗನ್ನಾಥ, ಅಶ್ವಥ್ ರಾಠೋಡ, ಬಸವರಾಜ ರಂಗಾನೋರ್, ಜಯಂತ ಮಾಲಗತ್ತಿ,, ಪ್ರಲ್ಹಾದ ವಿಶ್ವಕರ್ಮ, ಮಲ್ಲಿಕಾರ್ಜುನ ಪಲ್ಲೇದ್, ಹಾಗೂ ಶಿವರಾಮ ಚವ್ಹಾಣ, ಶೃತಿ ರುದ್ರಪ್ಪ ತಾವರೆ, ನಿರ್ಮಲಾ ಭಂಗಿ, ಗೋದಾವರಿ ಹಿರೇಮಠ, ಶಶಿಕಲಾ ಸಾಸಬಾಳ್, ಅಕ್ಕಮಹಾದೇವಿ ದೇಸಾಯಿ ಮತ್ತು ಸುವರ್ಣ ಶಿಲ್ಪಿ, ನಾಗೂಬಾಯಿ ಚಿತರೆ, ವಿಜಯಲಕ್ಷ್ಮಿ ತುರೆ, ಶೀಲಾ ದೊಡ್ಡಮನಿ, ಜ್ಯೋತಿ ಮುಗಳಕರ್, ಸಾಧನಾ ಶಿಲ್ಪಿ, ಅವಿತಾ ವಿಶ್ವಕರ್ಮ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಪ್ರತೀಕ್ಷಾ ಗಾರಂಪಳ್ಳಿ ಭರತನಾಟ್ಯ ಪ್ರದರ್ಶನ ಮಾಡಿದರು. ಅಶ್ವಿನಿ ಸರಾಫ್ ವೈಯುಕ್ತಿಕ ಗೀತೆ ಹಾಡಿದರು, ವಿನಯಕುಮಾರ ಶಿಲ್ಪಿ ವಂದೇ ಮಾತರಂ ಗೀತೆ ಹಾಡಿದರು, ಮಹಾದೇವ ಅಂಗಡಿ ಸ್ವಾಗತಿಸಿದರು, ಅಂಬರೀಶ್ ಸುಲೇಗಾಂವ್ ನಿರೂಪಿಸಿದರು, ಮೈಪಾಲ್ ಮೂಲಿಮನಿ ವಂದಿಸಿದರು. ಸಮಾವೇಶದಲ್ಲಿ ಎಲ್ಲಾ ಶರಣ ಸತ್ಪುರುಷರ ಭಾವಚಿತ್ರಗಳು ಮೆರುಗು ನೀಡಿತು.

ಹಿಂದೂ ಸಮ್ಮೇಳನದ ಅದ್ದೂರಿ ಶೋಭಾಯಾತ್ರೆ :

ಸಮಾವೇಶಕ್ಕೂ ಮುನ್ನ ಪಟ್ಟಣದಲ್ಲಿ ಸಾಂಸ್ಕೃತಿಕ ವೈಭವದ ಶೋಭಾಯಾತ್ರೆ ನಡೆಯಿತು. ಅಕ್ಕಮಹಾದೇವಿ ದೇವಸ್ಥಾನದಿಂದ ಆರಂಭವಾದ ಭಾರತ್ ಮಾತೆಯ ಭಾವಚಿತ್ರದ ಮೆರವಣಿಗೆಯು ಚಿತಾವಲಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಜಿಂಗ್ ಕ್ರಾಸ್, ಕೋರ್ಟ್ ರಸ್ತೆಯ ಮೂಲಕ ಶರಣಬಸವೇಶ್ವರ ದೇವಸ್ಥಾನಕ್ಕೆ ತಲುಪಿ ಸಮಾವೇಶಗೊಂಡಿತ್ತು. ಶೋಭಾಯಾತ್ರೆ ನಿಮಿತ್ತ ಕೇಸರಿ ಪರಾರಿಯಿಂದ ಹಾಗೂ ಧ್ವಜಗಳಿಂದ ಪಟ್ಟಣ ಸಿಂಗಾರಗೊಳಿಸಲಾಗಿತ್ತು. ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳಗಳು, ಭಜನಾ ತಂಡಗಳು ಮತ್ತು ಸಾಧು-ಸಂತರ ವೇಷಧಾರಿ ಮಕ್ಕಳನ್ನು ಕಂಡು ಸಾರ್ವಜನಿಕರು  ಪುಳಕಿತರಾದರು. ಮಹಿಳೆಯರ ಹಲಿಗೆ ಗೆ ವಾದನ ಮತ್ತು ಬಾಲಕಿಯರ ಸ್ವಯಂ ರಕ್ಷಣೆ ಕವಾಯತ್ತು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು.

Spread the love

Leave a Reply

Your email address will not be published. Required fields are marked *

You missed

error: Content is protected !!