ಶಂಕರಾಚಾರ್ಯರ ಜಯಂತಿ ಆಚರಣೆ | ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟಾಗ ಜೀವನ ಸಾರ್ಥಕ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಮ್ಮ ಜೀವನ ಎನ್ನುವುದು ಸ್ವಂತಕ್ಕಾಗಿ ಮುಡಿಪಾಗಿಟ್ಟುಕೊಳ್ಳದೆ ಸಮಾಜಕ್ಕಾಗಿ ಮುಡಿಪಾಗಿಟ್ಟುಕೊಂಡಾಗ ಜೀವನ ಸಾರ್ಥಕ ಆಗಲಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾವು ಪ್ರತಿನಿತ್ಯ ನಮ್ಮ ಸ್ವಂತಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಬದುಕುತ್ತಿದ್ದೇವೆ, ಹಿಂದಿನ ಮಹಾಪುರುಷರು ಸಂಸಾರ ಮತ್ತು ಸಂಬಂಧಗಳನ್ನು ಬದಿಗಿಟ್ಟು ಸಮಾಜಕ್ಕಾಗಿ, ದರ್ಮದ ಉಳುವಿಗಾಗಿ ಹೋರಾಟ ಮಾಡಿ ತಮ್ಮ ಜೀವನವೇ ಮುಡಿಪಾಗಿಟ್ಟು ತಮ್ಮ ಜೀವನ ಸಾರ್ಥಕ ಮಾಡಿಕೊಂಡಿದ್ದಾರೆ, ಅದರ ಪ್ರತಿಫಲವಾಗಿಯೇ ಇಂದು ಅಂತಹ ಮಹಾಪುರುಷರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ನಾವುಗಳು ಸಹಿತ ಸ್ವಾರ್ಥಕ್ಕಾಗಿ ಜೀವನ ಮಾಡದೇ ಸಮಾಜಕ್ಕಾಗಿ ಮುಡುಪಾಗಿಟ್ಟುಕೊಂಡರೆ ಜೀವನ ಸಾರ್ಥಕ ಆಗುತ್ತದೆ ಎಂದು ಹೇಳಿದರು.
ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಕುಮಾರಿ ಅಕ್ಷತಾ ಜಾನೀಬ್ ಅವರು ಜೀವನ ಚರಿತ್ರೆಯನ್ನು ತಿಳಿಸಿದರು. ವಿಪ್ರ ಸಮಾಜದ ಕೋಶಾಧ್ಯಕ್ಷ ಜಯಂತ ಮಾಲಗತ್ತಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಅಶ್ವತ್ಥ ನಾರಾಯಣ ಕುಲಕರ್ಣಿ, ಉಪ ನೋಂದಣಾಧಿಕಾರಿ ಆನಂದರಾವ್ ಕುಲಕರ್ಣಿ, ವಿಪ್ರ ಸಮಾಜದ ತಾಲೂಕು ಗೌರವ ಅಧ್ಯಕ್ಷ ದೇವಿದಾಸ್ ಕುಲಕರ್ಣಿ, ತಾಲೂಕ ಅಧ್ಯಕ್ಷ ಗಿರೀಶ್ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಹಣಮೇಶ್ ಆಚಾರ್ಯ, ಭೀಮರಾವ್ ಅಫಜಲಪುರಕರ್, ಗೌತಮ್ ನಾಯಕ್, ಗೋಪಾಲ್, ಸುರೇಶ್ ಕುಲಕರ್ಣಿ, ಗುಂಡೇರಾವ್ ಸರಾಫ್, ಪ್ರಕಾಶ್ ಮಾಲಖರೆ, ರಾಘವೇಂದ್ರ ಜಾನೀಬ್, ಮಾಣಿಕರಾವ್ ಡೋಣಗಾಂವ್, ರಾಘವೇಂದ್ರ ಡೋಣಗಾಂವ್, ಸಂಜೀವ್ ಜಾನೀಬ್, ನರಹರಿ ಮೋಹರೀರ್, ಆನಂದ ಪಟವಾರಿ, ಕಿಶನರಾವ್ ಕುಲಕರ್ಣಿ, ಸರೋಜಾ ಅಫಜಲಪುರಕರ್, ಶೃತಿ ಜಾನೀಬ್, ಸಕ್ಕುಬಾಯಿ ಕುಲಕರ್ಣಿ, ಲಕ್ಷ್ಮಿಬಾಯಿ ಸರಾಫ್, ಕಾವೇರಿ, ಜೋಶಿ, ವೈಜಯಂತಿ ಕುಲಕರ್ಣಿ, ಚಂದ್ರಕಲಾ ಡೋಣಗಾಂವ್, ಛಾಯಾ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.

