ಅಮರೇಶ್ವರಿ ಚಿಂಚನಸೂರ ಅವರಿಗೆ ಪ್ರತಿಷ್ಠಿತ ಸೈಮಾ ಅವಾರ್ಡ್ ಪ್ರದಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲೆಯ ಶ್ರೀ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಅಮರೇಶ್ವರಿ ಚಿಂಚನಸೂರ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಮಹಿಳಾ ಉದ್ಯಮದಲ್ಲಿ ಸುದೀರ್ಘ 45 ವರ್ಷಗಳ ಸೇವೆಯನ್ನು ಗುರುತಿಸಿ ಸೌತ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ವತಿಯಿಂದ ಹೈದರಾಬಾದ್ ನ ಪ್ರತಿಷ್ಠಿತ ಹೊಟೆಲ್ ನಲ್ಲಿ ಆಯೋಜಿಸಿದ್ದ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ನಾರಿಶಕ್ತಿ ಪುರಸ್ಕಾರ ಸೈಮಾ ಅವಾರ್ಡ್ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತೆಲಂಗಾಣ ಸರ್ಕಾರದ ಸಚಿವ ದನಸಾರಿ ಸೀತಕ್ಕ, ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೊಡ್ಲರಿ ಲಕ್ಷ್ಮಣ್ ಕೊಂಡಾ ಸುರೇಖಾ, ಚಾಮಲಾ ಕಿರಣ್ ಕುಮಾರ್ ರೆಡ್ಡಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಿದ್ದನಕೊಳ್ಳ ಶಿವಕುಮಾರ ಸ್ವಾಮಿಜಿ ಸಂಸದರಾದ ಸಾಗರ ಖಂಡ್ರೆ, ಖ್ಯಾಟ ನಟ ನಟಿಯರು ಉಪಸ್ಥಿತಿ ಇದ್ದು ಪ್ರಶಸ್ತಿ ಪ್ರದಾನ ಮಾಡಿದರು.

