ಅಮರೇಶ್ವರಿ ಚಿಂಚನಸೂರ್ ಅವರಿಗೆ ವೀರ ಕನ್ನಡಿಗ ಅವಾರ್ಡ್ಸ್ – 2025 ಪ್ರಶಸ್ತಿ ಪ್ರದಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಜೀ ಕನ್ನಡ ನ್ಯೂಸ್ ವತಿಯಿಂದ ಆಯೋಜಿಸಿದ್ದ ವೀರ ಕನ್ನಡಿಗ ಅವಾರ್ಡ್ 2025 ಕಾರ್ಯಕ್ರಮದಲ್ಲಿ ಪಟ್ಟಣದ ಶ್ರೀ ಗಂಗಾಪರಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ್ ಚಿಂಚನಸೂರ್ ಅವರಿಗೆ ಚಿತ್ರನಟಿ ತಾರಾ ಅವರು ವೀರ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಸಚಿವರಾದ ರಾಮಲಿಂಗ ರೆಡ್ಡಿ, ಎಚ್.ಕೆ ಪಾಟೀಲ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ನಿವೃತ್ತಿ ನ್ಯಾಯಮೂರ್ತಿ ಸಂತೋಷ ಹೆಗಡೆ, ಚಿತ್ರನಟಿ ಸಪ್ತಮಿ ಗೌಡ, ಚಿತ್ರನಟ ವಸಿಷ್ಠ ಸಿಂಹ ಮತ್ತು ಜೀ ವಾಹಿನಿಯ ಮುಖ್ಯಸ್ಥ ರವಿ ಸೇರಿದಂತೆ ಮತ್ತು ಇತರೆ ಗಣ್ಯ ವ್ಯಕ್ತಿಗಳು, ಚಿತ್ರನಟರು ಉಪಸ್ಥಿತರಿದ್ದರು.

