ಭಾಗೋಡಿ ಯುವ ಕೃಷಿ ವೈಭವ ವತಿಯಿಂದ ಪ್ರತಿಭಾ ಪುರಸ್ಕಾರ | ವಿಧ್ಯಾರ್ಥಿಗಳು ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಸಾಧನೆಯ ಶಿಖರಕ್ಕೇರಲು ಸಾಧ್ಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮ ಪಟ್ಟಾಗ ಜೀವನದಲ್ಲಿ ಸಾಧನೆಯ ಶಿಖರಕ್ಕೇರಲು ಸಾಧ್ಯ ಎಂದು ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಶಿವಶರಣಪ್ಪ,ಬಿ.ಗೌಡಪ್ಪ ಹೇಳಿದರು.
ತಾಲೂಕಿನ ಭಾಗೋಡಿ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಮಠದಲ್ಲಿ ಯುವ ಕೃಷಿ ವೈಭವ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ದೈರ್ಯ ಸ್ಥೈರ್ಯ, ವಿಶ್ವಾಸ ಇರಬೇಕು ಹಾಗೂ ಹಿಂಜರಿಕೆ ಮತ್ತು ಕೀಳರಿಮೆ ಭಾವನೆ ತೊರೆಯಬೇಕು ಎಂದು ಹೇಳಿದರು. ಈಗಿನ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಸ್ತುತ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯಕ ಕಾಯಕವಾಗಿದೆ, ಪ್ರಾಮಾಣಿಕವಾಗಿ ದುಡಿಯಬೇಕಷ್ಟೇ. ಕೃಷಿ ತಂತ್ರಜ್ನಾನದಿಂದ ಪರಿವರ್ತನೆ ಸಾಧ್ಯ ಈಗ ಸಾಕಷ್ಟು ಕೃಷಿಯ ಹೊಸ ತಂತ್ರಜ್ಞಾನಗಳು ಕೈಗೆಟುಕುತ್ತಿವೆ ಇವುಗಳನ್ನು ರೈತರು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ನೇತೃತ್ವ ವಹಿಸಿದ್ದ ರಾಯಚೂರ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಶ್ರೀ ಮಹಾಂತಗೌಡ.ಎಸ್.ಪಾಟೀಲ್ ಮಾತನಾಡಿ, ನಮ್ಮ ತಂದೆಯವರಾದ ಶಿವಲಿಂಗಪ್ಪ ಪಾಟೀಲ ಅವರ ಹೆಸರಿನಲ್ಲಿ ಒಂದು ಫೌಂಡೇಶನ್ ಸ್ಥಾಪನೆ ಮಾಡುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯ ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಸ್ತಿಯನ್ನು ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಾನಿಧ್ಯ ವಹಿಸಿದ್ದ ಗುರುಮಿಠಕಲ್-ಭಾಗೋಡಿ ಖಾಸಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು, ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ.ಎಸ್.ಪಾಟೀಲ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ರವೀಂದ್ರಎಸ್.ಶಿಕಾರಿ ಅವರು ಮಾತನಾಡಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಓಂಕಾರ ಪಸಾರ, ಉದ್ಯಮಿ ಹಾಗೂ ಪ್ರಗತಿಪರ ರೈತ ಚಿಂತನಪಾಟ ವೆಂಕಟ ನರಸಿಂಹರಾಜು, ಗ್ರಾಮ ಪಂಚಾಯತ ಸದಸ್ಯರಾದ ಮುತ್ತಣ್ಣ ಶಿರೂರ, ಜುಲ್ಫೆಕಾರ ಖಾಜಿ, ಮಲ್ಲಿಕಾರ್ಜುನ ಏರಿ, ಬಸವರಾಜ ಪಾಟೀಲ ದಳಪತಿ, ಬಸವರಾಜ ಮಿಲ್ಟ್ರಿ, ರಾಜೇಂದ್ರಪ್ಪ ಅರಣಕಲ್, ಶರಣಬಸಪ್ಪ ಐನಾಪೂರ, ಇಂದುಶೇಖರ ಬೆಂಕಿ, ಸಂತೋಷ ಐನಾಪೂರ, ಸಂದೀಪ್ ಹಾಸಬಾ, ಮಲ್ಲಿಕಾರ್ಜುನ ದೊಡ್ಡಮನಿ, ದೇವಿಂದ್ರ ಅರಣಕಲ್, ಬೋಜು ಶೇರಿ, ಶಿವಯೋಗಿ ಏರಿ, ಈಶು ಕಲಬುರ್ಗಿ, ಸಿದ್ದು ಐನಾಪೂರ, ಮರೇಪ್ಪ ವಗ್ಖರ್, ಶರಣಬಸಪ್ಪ ಬೆಂಕಿ, ಮಹೇಶ್ ಕುದರಿ, ಅಭಿಷೇಕ್ ಕಲಬುರ್ಗಿ ಸೇರಿದಂತೆ ಇತರರು ಇದ್ದರು. ಪಲ್ಲವಿ, ಭವಾನಿ ಪ್ರಾರ್ಥಿಸಿದರು, ದೇವಿಂದ್ರ ನಾಟೀಕಾರ ಸ್ವಾಗತಿಸಿದರು, ಬಸವರಾಜ ಯಂಬತ್ನಾಳ ನಿರೂಪಿಸಿದರು, ಶಿವುಕುಮಾರ ಕಲಬುರ್ಗಿ ವಂದಿಸಿದರು.

