ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಮಹೇಶ್ ರೆಡ್ಡಿ ಮುದ್ನಾಳ ಆಯ್ಕೆ | ಕಾರ್ಯಕರ್ತರಿಂದ ಅಭಿನಂದನೆಗಳ ಸುರಿಮಳೆ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಮತಕ್ಷೇತ್ರದ ಯುವ ನಾಯಕ ಮಹೇಶ್ ರೆಡ್ಡಿ ಮುದ್ನಾಳ ಅವರು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಅವರ ಕಚೇರಿಯಲ್ಲಿ ಅಭಿಮಾನಿ ಬಳಗ ಹಾಗೂ ಪಕ್ಷದ ಕಾರ್ಯಕರ್ತರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಹಾರ ಹಾಕಿ, ಶಾಲು ಹೊದಿಸಿ ಸಿಹಿ ತಿನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು. ಈ ವೇಳೆ ನಗರ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕಟ್ಟಿಮನಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಮಹೇಶ್ ರೆಡ್ಡಿ ಮುದ್ನಾಳ ಅವರು ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಯುವ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಜಿಲ್ಲೆಯ ರಾಜಕೀಯ ಬೆಳವಣಿಗೆಗಳಲ್ಲಿ ಯುವ ನಾಯಕತ್ವದ ಪಾತ್ರ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವರ ಆಯ್ಕೆ ಪಕ್ಷಕ್ಕೆ ಹೊಸ ಚೈತನ್ಯ ತಂದಿದೆ ಎಂದು ಅಭಿಪ್ರಾಯಪಟ್ಟರು.
ತಂದೆಯ ಹಾದಿಯಲ್ಲಿ ರಾಜಕೀಯವಾಗಿ ಮುನ್ನಡೆಯುತ್ತಿರುವ ಅವರು, ಗ್ರಾಮ ಮಟ್ಟದಿಂದ ಪಕ್ಷದ ಸಂಘಟನೆ ಬಲಪಡಿಸುವ ಕೆಲಸಕ್ಕೆ ಒತ್ತು ನೀಡುತ್ತಿರುವುದು ಗಮನಾರ್ಹ ಎಂದು ಕಾರ್ಯಕರ್ತರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಡಿದ ಮಹೇಶ್ ರೆಡ್ಡಿ ಮುದ್ನಾಳ ಅವರು, ನನ್ನನ್ನು ಗುರುತಿಸಿ ಗುರುತರವಾದ ಜವಾಬ್ದಾರಿ ನೀಡಿದ ಬಿಜೆಪಿ ರಾಜ್ಯ ನಾಯಕರಿಗೆ ಹಾಗೂ ಅಭಿನಂದಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಕೃತಜ್ಞತೆಗಳು ಸಲ್ಲಿಸಿದರು. ಪಕ್ಷದ ತತ್ವಸಿದ್ಧಾಂತಗಳಿಗೆ ಬದ್ಧರಾಗಿ ಜನಸೇವೆಯೇ ತನ್ನ ಮೊದಲ ಆದ್ಯತೆ ಎಂದು ಹೇಳಿದರು. ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸಿ ಪಕ್ಷ ಸಂಘಟನೆ ವಿಸ್ತರಣೆಗೆ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ನಗರಸಭೆ ಮಾಜಿ ಸದಸ್ಯ ಸ್ವಾಮಿದೇವ ದಾಸನಕೇರಿ, ಪ್ರ.ದರ್ಜೆ ಗುತ್ತಿಗೆದಾರ ಶಾಂತಗೌಡ ಪಗಲಾಪುರ, ಬಿಜೆಪಿ ಮುಖಂಡರಾದ ಚನ್ನಯ್ಯ ಮ್ಯಾಳಿಕೇರಿ, ಪರಮರೆಡ್ಡಿ ಕಂದಕೂರ, ಮಲ್ಲಣ್ಣಗೌಡ ತಳಕ್, ಡಾ. ಭೀಮರಾಯ ಲಿಂಗೇರಿ, ರೈತ ಮೋರ್ಚ ಅಧ್ಯಕ್ಷ ಶಿವಣ್ಣ ವಿಶ್ವಕರ್ಮ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ್ ಕಡೆಸೂರ, ಕಾಶೀನಾಥ್ ಕ್ಷೀರಸಾಗರ್, ನಗರ ಕಾರ್ಯದರ್ಶಿ ಲಕ್ಮಿಪುತ್ರ ಮಾ.ಪಾಟೀಲ್, ಮಾಜಿ ನಗರ ಯೋಜನಾ ಪ್ರಾದಿಕಾರದ ಸದಸ್ಯ ಸುರೇಶ್ ಆಕಳ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ್ ಮುದ್ನಾಳ ಸೇರಿದಂತೆ ಇತರರು ಇದ್ದರು.

