ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆ ವಿರುದ್ಧ ಆರೋಪ ಸತ್ಯಕ್ಕೆ ದೂರ: ಗಂಗಾಣಿ

ನಾಗಾವಿ ಎಕ್ಸಪ್ರೆಸ್

ಚಿಂಚೋಳಿ: ತಾಲೂಕಿನ ಶ್ರೀ ಸಿದ್ಧಸಿರಿ ಇಥೆನಾಲ ಕಾರ್ಖಾನೆ ರೈತರ ಕಬ್ಬು ತೂಕದಲ್ಲಿ ವ್ಯತ್ಯಾಸ ಬರುತ್ತಿದೆ, ಹೊರಗಡೆ ತೂಕಕ್ಕೆ ಇಲ್ಲಿನ ತೂಕಕ್ಕೆ (1000) ಕೆಜಿ ಕಡಿಮೆ ಬರುತ್ತಿದೆ ಎಂದು ಕೆಲ ರೈತರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಖಾನೆ ಕಡೆಯಿಂದ ಯಾವುದೇ ಮೋಸ ಮಾಡುತ್ತಿಲ್ಲ, ಕೆಲವರಿಗೆ ಸಹಿಸಲಾರದ ಸಂದರ್ಭದಲ್ಲಿ ಆರೋಪ ಮಾಡುತ್ತಿದ್ದಾರೆ. ಕಟಾವು ಆದ ಕೂಡಲೇ ವೇಬ್ರಿಜ್ ತೂಕ ಮಾಡಿದ್ದು, ಮಷಿನ್ ಕಟಿಂಗ್ ನಿಂದ ಕಟಾವು ಆದ ಕಬ್ಬು ಸುಮಾರು 13 ಘಂಟೆಗಳ ಕಾಲ ಗಾಳಿ ಬಿಸಿಲಿಂದ ಕೂಡಿದ್ದು, ಸುಮಾರು 80 ಕಿ. ಮೀ ದೂರದಿಂದ ಬರುತ್ತಿದ್ದು ಹಾಗೂ ರಸ್ತೆ ಸರಿ ಇರದೇ ಇರುವುದರಿಂದ ಮತ್ತು ರಸ್ತೆ ಮಧ್ಯ ಗಿಡ ಗಂಟಿ ಹತ್ತಿ ಕಬ್ಬಿನ ತುಕುಡಿ ಎಲ್ಲೆಂದರಲ್ಲಿ ಬೀಳುತ್ತಾ ಹಾಗೂ ಗಾಳಿ ಬಿಸಿಲಿನಿಂದ ಕಬ್ಬಿನ ನೀರಿನಾಂಶ ಒಣಗಿ ರೈತರು ಮಾಡಿದ ತೂಕಕ್ಕೆ ನಂತರ ಕಾರ್ಖಾನೆಯ ತೂಕಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತೆ, ಅಂದರೆ ಒಂದು ಲಾರಿ ಕಬ್ಬು 500 ರಿಂದ 620 ಕೆಜಿ ವ್ಯತ್ಯಾಸ ಬಂದಿದೆ, ಲೇಬರ್ ಕಟಿಂಗ್ ಮತ್ತು ಮಷೀನ್ ಕಟಿಂಗ್ ವ್ಯತ್ಯಾಸ ಇರುವುದು ಸಹಜ. ಹಾಗಾಗಿ ರೈತರು ಸುಳ್ಳು ಸುದ್ದಿಗೆ ಯಾವುದೇ ಕಾರಣಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ, ಸ್ವತಹ ರೈತರು ಖುದ್ದಾಗಿ ತೂಕ ಪರಿಶೀಲನೆ ನಡೆಸಿ ಕಬ್ಬು ಕಂಪನಿಗೆ ನೀಡುವಂತೆ ಕಂಪನಿಯ ವ್ಯವಸ್ಥಾಪಕ ಮಂಡಳಿ ರೈತರಿಗೆ ಸೂಚಿಸಿದೆ.

ಅದರಂತೆ ಭಾನುವಾರ ರೈತರು ಸ್ವತಹ ರಾತ್ರಿ 11 ಗಂಟೆಗೆ ಕಾರ್ಖಾನೆಗೆ ಹೋಗಿ ರೈತರ ಸಮ್ಮುಖದಲ್ಲಿ ಕಬ್ಬಿನ ಲಾರಿಯ ತೂಕ ಮಾಡಿಸಿದ್ದು, ಇದಕ್ಕೆ ರೈತರಾದ ವೀರೇಶ್ ಯಂಪಳ್ಳಿ ಸೇರಿದಂತೆ ಅನೇಕರು ಪ್ರತ್ಯಕ್ಷವಾಗಿ ಕಂಡು ಪ್ರಮಾಣಿಸಿ ನೋಡಿ ತಮ್ಮ ಕಬ್ಬು ಕಂಪನಿಗೆ ನೀಡಿದ್ದಾರೆ.

ಮಷೀನ್ ಕಟಿಂಗ್ ಪ್ರತಿ ಟನ್ನಿಗೆ 60 ಕೆಜಿ ಸೂಟ್, ಲೇಬರ್ ಕಟಿಂಗ್ ಪ್ರತಿ ಟನ್ನಿಗೆ 10 ಕೆಜಿ ಸೂಟ್, ಕ್ಷೇತ್ರದಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಸಿದ್ಧಸಿರಿ ಸೌಹಾರ್ದ ಸಂಸ್ಥೆ ಇಥೆನಾಲ್ ಕಂಪನಿ ಸ್ಥಾಪಿಸಿದ್ದು, ಸಹಿಸದ ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ರೈತರಿಗೆ ವರವಾದ ಕಂಪನಿ ವಿರುದ್ಧ ಕುತಂತ್ರ ನಡೆಸುತ್ತಿದ್ದು, ರೈತರು ಕಿವಿಗೊಡಬೇಡಿ, ತೂಕದಲ್ಲಿ ಯಾವುದೇ ಮೋಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರೇಶ ಯಂಪಳ್ಳಿ, ರಮೇಶ್ ಸಿದ್ದನಾರ್, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು

Spread the love

Leave a Reply

Your email address will not be published. Required fields are marked *

error: Content is protected !!