ಸೂಲಹಳ್ಳಿ ಗ್ರಾಮದ ದಲಿತರ ಬಡಾವಣೆ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ತಹಸೀಲ್ದಾರ್ ಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕಮರವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸೂಲಹಳ್ಳಿ ಗ್ರಾಮದ ದಲಿತರ ಬಡಾವಣೆ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಮರವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸೂಲಹಳ್ಳಿ ಗ್ರಾಮದ ದಲಿತರ ಬಡಾವಣೆಯಲ್ಲಿ ಸುಮಾರು 100 ಮನೆಯಿಂದ 150 ಮನೆಗಳು ಇರುತ್ತವೆ. ಸುಮಾರು 70 ವರ್ಷದಿಂದ 80 ವರ್ಷದವರೆಗೆ ವಾಸಿಸುತ್ತಾರೆ. ತೆರಿಗೆ ಹಣ ಕೂಡ ಕಟ್ಟುತ್ತಾ ಬಂದಿದ್ದಾರೆ. ಈಗ ಸದ್ಯ ಆನ್-ಲೈನ್ ಮೂಲಕ ತೆರಿಗೆ ಕೂಡ ಕಟ್ಟುತ್ತಾ ಇದ್ದಾರೆ. ಆದರೂ ಹಕ್ಕು ಬದಲಾವಣೆ ಮಾಡಬೇಕಾದರೆ ಆಗುತ್ತಿಲ್ಲ. ಇದರಿಂದ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಹೀಗಾಗಿ ಇದು ವಸತಿ ಪ್ರದೇಶ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರವಿ ತಿಮ್ಮಯ್ಯ ಗುತ್ತೇದಾರ, ಕಾಶಪ್ಪ ತಂದೆ ಮರಗಪ್ಪ ನಡುವಿನಮನಿ, ಶಿವಪ್ಪ ಸಿದ್ರಾಮ ನಡುವಿನಮನಿ, ಶರಣಪ್ಪ ಭೀಮಣ್ಣ ಮಾಶಾಳ, ಸಣ್ಣ ಶರಣಪ್ಪ ತಂದೆ ಭೀಮಣ್ಣ ಮಾಶಾಳ, ಬಸಪ್ಪ ತಂದೆ ಚಂದಪ್ಪ ದೊಡ್ಡಮನಿ, ಸೈಬು ಮರಗಪ್ಪ ನಡುವಿನಮನಿ, ಭೀಮರಾಯ ಭೀಮಣ್ಣ ಮಾಶಾಳ, ಸಂಜು ಹಣಮಂತ ನಡುವಿನಮನಿ, ರಾಮಚಂದ್ರ ಮಲ್ಲಪ್ಪ ತಳವಾರ, ಶಿವಪ್ಪ ಭೀಮಣ್ಣ ದೊಡ್ಡಮನಿ ಸೇರಿದಂತೆ ಇನ್ನಿತರರಿದ್ದರು.

