ಚಿತ್ತಾಪುರ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ವಿನಾಕಾರಣ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವುದು ಬೀಡಿ: ಮಲ್ಲಿಕಾರ್ಜುನ ಕಾಳಗಿ ವಾಗ್ದಾಳಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಯಾವ ಅಧಿಕಾರಿಗಳೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈಗೊಂಬೆಯಾಗಿ ಕೆಲಸ ಮಾಡಿಲ್ಲ, ಅವರು ಸರ್ಕಾರದ ನಿಯಮಾವಳಿಗಳ ಪ್ರಕಾರ ಕೆಲಸ ಮಾಡಿದ್ದಾರೆ, ಹೀಗಾಗಿ ಆರ್.ಎಸ್.ಎಸ್ ನವರು ವಿನಾಕಾರಣ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ನೇರವಾಗಿ ವಾಗ್ದಾಳಿ ನಡೆಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಎಸ್.ಎಸ್ ಪಥ ಸಂಚಲನ ನಿಮಿತ್ತ ಬ್ಯಾನರ್ ಕಟ್ಟಲು ಬರೀ ಅರ್ಜಿ ನೀಡಿದ್ದಾರೆ, ಆದರೆ ಇದಕ್ಕೆ ಪುರಸಭೆ ಅನುಮತಿ ಕೊಟ್ಟಿಲ್ಲ ಆದರೂ ಪರವಾನಗಿ ಪಡೆಯದೇ ಅಕ್ರಮವಾಗಿ ಮಧ್ಯೆ ರಾತ್ರಿಯಲ್ಲಿ ಕಳ್ಳರಂತೆ ಬ್ಯಾನರ್ ಹಾಗೂ ಡಿವೈಡರ್ ಮೇಲೆ ಧ್ವಜ ಕಟ್ಟಲು ಪ್ರಯತ್ನ ಮಾಡಿದ್ದಾರೆ ಹೀಗಾಗಿ ಅವುಗಳನ್ನು ತೆರವುಗೊಳಿಸಿದ್ದಾರೆ ಇದರಲ್ಲಿ ಅಧಿಕಾರಿಗಳ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ತಾಲೂಕು ಆಡಳಿತ ಆಗಲಿ, ಸ್ಥಳೀಯ ಪುರಸಭೆ ಆಡಳಿತವಾಗಲಿ ಯಾರ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಿಲ್ಲ ಆರ್.ಎಸ್.ಎಸ್ ಅವರು ಮಧ್ಯೆ ರಾತ್ರಿಯಲ್ಲಿ ಬ್ಯಾನರ್, ಪರಾರಿ, ಕೇಸರಿ ಧ್ವಜಗಳು ಕಟ್ಟುವ ಮೂಲಕ ಸರ್ಕಾರದ ನಿಯಮಗಳು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಅಥವಾ ಆರ್.ಎಸ್.ಎಸ್ ಮುಖಂಡರಾಗಲಿ ಸಚಿವ ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಬಗ್ಗೆ ಮಾತನಾಡಲಿ, ಅದರೆ ಅವರ ಬಗ್ಗೆ ಹಾಗೂ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ಅವಾಚ್ಯ ಶಬ್ದಗಳಿಂದ ಹೀಯಾಳಿಸಿ ಮಾತನಾಡಿದರೆ ಕಂಡಕಂಡಲ್ಲಿ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳ ಮೇಲೆ ಇರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಲ್ಲಾ ಜಾತಿ ಜನಾಂಗದವರಿಗೆ ಸಂಬಂಧಪಟ್ಟವರು, ಹೀಗಾಗಿ ಅವರ ಬಗ್ಗೆ ಟೀಕೆ ಟಿಪ್ಪಣಿ ಮಾಡುವ ಮುಂಚೆ ಸ್ವಲ್ಪ ಯೋಚಿಸಿ ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.

“ಎಲ್ಲೋ ಕುಳಿತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೆಲವು ಸಮಾಜ ಘಾತುಕ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ ಆದರೆ ಇಲ್ಲಿವರೆಗೆ ಯಾವೊಬ್ಬ ಬಿಜೆಪಿ ಮುಖಂಡರು ತುಟಿ ಬಿಚ್ಚಿಲ್ಲ ಇದು ಖಂಡನೀಯ”.-ಮಲ್ಲಿಕಾರ್ಜುನ ಕಾಳಗಿ ಪುರಸಭೆ ಮಾಜಿ ಅಧ್ಯಕ್ಷರು ಚಿತ್ತಾಪುರ.

Spread the love

Leave a Reply

Your email address will not be published. Required fields are marked *

error: Content is protected !!