ಚಿತ್ತಾಪುರ ಭೀಮ ನಡಿಗೆ ಪಥಸಂಚಲನದಲ್ಲಿ ಗಮನ ಸೆಳೆದ ಸಂವಿಧಾನ ಪೀಠಿಕೆಯೊಂದಿಗೆ ಒಟ್ಟು 22 ಸಮಾಜಗಳ ಗುರುಗಳ ಭಾವಚಿತ್ರಗಳು

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ಸೋಮವಾರ ನಡೆಯಲಿರುವ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಭೀಮ ನಡಿಗೆ ಪಥಸಂಚಲನ ಹಾಗೂ ಸಂವಿಧಾನ ಸಮಾವೇಶ ಕಾರ್ಯಕ್ರಮದ ನಿಮಿತ್ತ ಪಟ್ಟಣದ ಚಿತ್ತಾವಲಿ ವೃತ್ತದಿಂದ ಪ್ರಾರಂಭವಾಗುವ ಮೆರವಣಿಗೆಯಲ್ಲಿ ಸಂವಿಧಾನ ಪೀಠಿಕೆಯೊಂದಿಗೆ ಒಟ್ಟು 22 ಸಮಾಜಗಳ ಗುರುಗಳ ಭಾವಚಿತ್ರಗಳು ನೋಡುಗರ ಕಣ್ಮನ ಸೆಳೆದಿದೆ.

ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ, ಮಾದರ ಚೆನ್ನಯ್ಯ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್ ಮಹಾರಾಜ್, ಹಗಪದ ಅಪ್ಪಣ್ಣ, ಸಮಗಾರ ಹರಳಯ್ಯ, ಸವಿತಾ ಮಹರ್ಷಿ, ಭಗೀರಥ ಮಹಾರಾಜ್, ಟಿಪ್ಪು ಸುಲ್ತಾನ್, ಶಿವಾಜಿ ಮಹಾರಾಜ್, ಸಿದ್ದರಾಮೇಶ್ವರ, ವಿಶ್ವಕರ್ಮ, ಸರ್ವಜ್ಞ, ಗಾಯಿತ್ರಿ ದೇವಿ, ಶರಣ ಹೂಗಾರ ಮಾದಣ್ಣ, ಮಹಾವೀರ, ನುಲಿಯ ಚಂದಯ್ಯ ಅವರ ಭಾವಚಿತ್ರಗಳ ಜೊತೆಗೆ ಸಮಾಜದ ಧ್ವಜಗಳು ರಾರಾಜಿಸುತ್ತಿವೆ. ಇನ್ನೇನು ಕೆಲವೇ ಕ್ಷಣದಲ್ಲಿ ಬೀದರ ಭಾರತೀಯ ಬೌದ್ಧ ಮಹಾಸಭೆಯ 800 ಜನ ಸಮವಸ್ತ್ರದೊಂದಿಗೆ ಭೀಮ ನಡೆ ಪಥಸಂಚಲನ ಪ್ರಾರಂಭವಾಗಲಿದೆ.

Spread the love

Leave a Reply

Your email address will not be published. Required fields are marked *

error: Content is protected !!