ಸಂಕಷ್ಟದ ನಡುವೆಯೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.96.32 ಫಲಿತಾಂಶ ಪಡೆದ ಭೂಮಿಕಾ ಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿದ್ದ ಡಾ.ಫಾರುಖ್ ಮನೂರ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪಟ್ಟಣದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ, ತಂದೆಯ ಅನಾರೋಗ್ಯದ ಸಂಕಷ್ಟದ ನಡುವೆಯೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.96.32 ಫಲಿತಾಂಶ ಪಡೆದು ಗಮನಾರ್ಹ ಸಾಧನೆ ಮಾಡಿದ ಸುದ್ದಿ ತಿಳಿದ ನಗರದ ಪ್ರತಿಷ್ಠಿತ ಮನೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ.ಫಾರುಖ್ ಮನೂರ್ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿದ್ದಾರೆ.
ಕಷ್ಟಕರ ಪರಿಸ್ಥಿತಿಯಲ್ಲಿಯೂ ತೋರಿದ ಭೂಮಿಕಾ ಪರಿಶ್ರಮ ಮತ್ತು ಛಲ ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ. ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿ ಸಾಗಲಿ, ಐಎಎಸ್ ಆಗುವ ಗುರಿ ಈಡೇರಲಿ, ಐಎಎಸ್ ಅಧಿಕಾರಿಯಾಗಿ ಇದೇ ಜಿಲ್ಲೆಗೆ ಬರಬೇಕು ಹಾಗೂ ಮುಂದೆ ನೀನು ಸಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತಾಗಬೇಕು ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನೋವಿನ ಸಂಗತಿಯಲ್ಲಿ ಸಾಧನೆಗೈದ ಭೂಮಿಕಾ ಬಗ್ಗೆ ಪರಿಚಯಿಸಿದ ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಹಾಗೂ ಯುವ ಸಾಹಿತಿ ಪೂಜಾ ಭಂಕಲಗಿ ಅವರನ್ನು ಡಾ. ಫಾರುಖ್ ನೆನೆದರು.
ಇವರು ಸಹ ವಿಧ್ಯಾರ್ಥಿನಿ ಭೂಮಿಕಾ ಗೆ ಕರೆ ಮಾಡಿ ಶುಭಾಶಯಗಳು ತಿಳಿಸಿದ್ದಾರೆ. ವಿದ್ಯಾರ್ಥಿ ವೇತನ ನೀಡಿದ್ದು ಸಂತಸದ ಕ್ಷಣವಾಗಿತ್ತು. ಚಿತ್ತಾಪುರದ ಈ ಹೆಮ್ಮೆಯ ಹುಡಗಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

