ಚಿತ್ತಾಪುರ ಪಟ್ಟಣದಲ್ಲಿ ರಸಗೊಬ್ಬರ ಮನಬಂದಂತೆ ಮಾರಾಟ, ರೈತ ಸಂಘ ಆರೋಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಗೊಬ್ಬರ ಅಂಗಡಿಯವರು ರಸಗೊಬ್ಬರವನ್ನು ಮನಬಂದಂತೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶಾಮರಾಯ ಸಂಗಾವಿ ಆರೋಪಿಸಿದ್ದಾರೆ.
ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಪಟ್ಟಣದ ಎಲ್ಲಾ ಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಅಂಗಡಿಯವರಿಗೆ ನಿಗದಿತ ದರದಲ್ಲಿ ಮಾರಾಟ ಮಾಡಬೇಕು, ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಲೈಸೆನ್ಸ್ ರದ್ದು ಮಾಡಿಸಿ ಅಂಗಡಿಯನ್ನು ಬೀಗ ಹಾಕಿಸುತ್ತೇವೆ ಎಂದು ರೈತ ಸಂಘಟನೆ ಎಚ್ಚರಿಕೆ ನೀಡಿತ್ತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶಾಮರಾಯ ಸಂಗಾವಿ, ಗೌರವಾಧ್ಯಕ್ಷ ಆಯಿಲ್ ರೆಡ್ಡಿ ಪಾಟೀಲ ಯರಗಲ, ಖಜಾಂಚಿ ನಾಗರಾಜ ಹೂಗಾರ ಮೊಗಲಾ ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರವೀಂದ್ರನಾಥ್ ಮಡಿವಾಳ ಉಪಸ್ಥಿತರಿದ್ದರು.
