ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ಜಯಂತಿ ಆಚರಣೆ, ನಾರಾಯಣ ಗುರುಗಳ ಮೂರ್ತಿಯ ಭವ್ಯ ಮೆರವಣಿಗೆ | ನಾರಾಯಣ ಗುರುಗಳು ಮಹಾನ್ ಮಾನವತಾವಾದಿ: ರೇಣುಕಾನಂದ ಮಹಾಸ್ವಾಮಿಗಳು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂದು ವಿಶ್ವ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆಯ ಬ್ರಹ್ಮಶ್ರೀ ನಾರಾಯಣ ಗುರು ಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮಿಗಳು ಹೇಳಿದರು.
ಪ್ರಜಾ ಸೌಧ ಆವರಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಆರ್ಯ ಈಡಿಗ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾರಾಯಣ ಗುರು ಕೇರಳ ರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರು ಜನ್ಮತಾಳಿ, ಸಮಾಜದ ತಾರತಮ್ಯಗಳನ್ನು ಹೋಗಲಾಡಿಸಲು ಇಡೀ ಜೀವನವನ್ನು ಮುಡಿಪಾಗಿಟ್ಟ ಮಹಾನ್ ಚೇತನಲಾಗಿದ್ದಾರೆ ಎಂದು ಹೇಳಿದರು. ರಕ್ತ ಕ್ರಾಂತಿ ಇಲ್ಲದೆ, ಮೌನ ಕ್ರಾಂತಿಯ ಮೂಲಕ ತಮ್ಮ ವಿಚಾರಗಳ ಮೂಲಕವೇ ಸಮಾಜ ಪರಿವರ್ತನೆಗೆ ಕಾರಣರಾದವರು ನಾರಾಯಣ ಗುರುಗಳು ಎಂದು ಹೇಳಿದರು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಶತಮಾನದ ಹಿಂದೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಜನರಿಗೆ ನ್ಯಾಯ ಒದಗಿಸಿಕೊಟ್ಟವರು ನಾರಾಯಣ ಗುರುಗಳು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸವಾಗಬೇಕು ಎಂದರು
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ನಾರಾಯಣ ಗುರುಗಳು ನಡೆಸಿದ ಹೋರಾಟ ಸ್ಮರಣೀಯ. ಈ ನಿಟ್ಟಿನಲ್ಲಿ ನಾರಾಯಣ ಗುರುಗಳ ಸಂದೇಶವನ್ನು ಜೀವನದುದ್ದಕ್ಕೂ ಪಾಲಿಸೋಣ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ತಹಸೀಲ್ದಾರ್ ನಾಗಯ್ಯ ಹಿರೇಮಠ, ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಈಡಿಗ ಸಮಾಜದ ಹಿರಿಯ ಮುಖಂಡ ಶಂಕರಗೌಡ ರಾವೂರಕರ್ ಲೀಡರ್ ಅವರು ಮಾತನಾಡಿದರು.
ಸಿಪಿಐ ಚಂದ್ರಶೇಖರ ತಿಗಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಬಾರ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಅಶೋಕ ಗುತ್ತೇದಾರ ಬಡದಾಳ, ಹಿರಿಯ ನ್ಯಾಯವಾದಿ ಚಂದ್ರಶೇಖರ ಅವಂಟಿ, ಮುಖಂಡರಾದ ಅಂಬಯ್ಯ ಗುತ್ತೇದಾರ, ನೀಲಕಂಠ ಗುತ್ತೇದಾರ ಕಾಳಗಿ ಅವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಈಡಿಗ ಸಮಾಜದ ಮುಖಂಡರಾದ ವಿನೋದ ಗುತ್ತೇದಾರ, ಶಿವಯ್ಯ ಗುತ್ತೇದಾರ, ಶ್ರೀಶೈಲ್ ಗುತ್ತೇದಾರ, ಸಾಗರ್ ಗುತ್ತೇದಾರ, ಪಂಕಜ್ ಗೌಡ, ಸುನೀಲ್ ಗುತ್ತೇದಾರ ವಾಡಿ, ಅಂತಯ್ಯ ಮುಸ್ತಾಜರ್, ಹಣಮಯ್ಯ ಲಾಡ್ಲಾಪೂರ, ದೇವಪ್ಪ ನಂದೂರಕರ್, ಕಾಶಿರಾಯ ಕಲಾಲ್, ಯಲ್ಲಯ್ಯ ಕಲಾಲ್, ನಾಗು ಮರಗೋಳ, ಅಂಬರೀಷ್ ಮರಗೋಳ, ಅನೀಲ ಗುತ್ತೇದಾರ, ರವಿ ಸೂಲಹಳ್ಳಿ, ವಿರೇಶ್ ಸೂಲಹಳ್ಳಿ, ಜಗದೇವ ಗುತ್ತೇದಾರ, ಸಿದ್ದು ಸೂಲಹಳ್ಳಿ, ರಕ್ಷಿತ್ ಮುಸ್ತಾಜರ್, ರಾಜು ಗುತ್ತೇದಾರ, ಚಂದ್ರು ಗುತ್ತೇದಾರ, ಯೋಗೇಶ್, ನಿತೀಶ್, ಪ್ರಶಾಂತ್ ಕಲಾಲ್ ಸೇರಿದಂತೆ ಇತರರು ಇದ್ದರು. ಪಶು ಅಧಿಕಾರಿ ಡಾ.ಶಂಕರ ಕಣ್ಣಿ ನಿರೂಪಿಸಿದರು.
ಕಾರ್ಯಕ್ರಮದ ನಂತರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಆನಂದ ರಾವೂರಕರ್, ಉಪಾಧ್ಯಕ್ಷ ಆನಂದ ಗುತ್ತೇದಾರ ಇವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾರಾಯಣ ಗುರುಗಳ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗೆ ಯುವಕರು ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು. ಪೊಲೀಸ್ ಅಧಿಕಾರಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

