Oplus_131072

ಚಿತ್ತಾಪುರ ವಕೀಲರ ಸಂಘದ ಅಧ್ಯಕ್ಷರಾಗಿ ಸೋಮಶೇಖರ ಕರದಳ್ಳಿ ಆಯ್ಕೆ: ವಕೀಲರಿಂದ ವಿಜಯೋತ್ಸವ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕು ವಕೀಲರ ಸಂಘದ 2025-27 ಅವಧಿಗಾಗಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸೋಮಶೇಖರ ಬಿ.ಕರದಳ್ಳಿ, ಉಪಾಧ್ಯಕ್ಷರಾಗಿ ಶರಣಗೌಡ ಎಂ.ಪಾಟೀಲ, ಕಾರ್ಯದರ್ಶಿಯಾಗಿ ಭೀಮಶಪ್ಪ ಎಲ್.ವಾಡಿ, ಜಂಟಿ ಕಾರ್ಯದರ್ಶಿಯಾಗಿ ಚಂದ್ರಶೇಖರ ಆರ್.ಅಂಗಡಿ, ಖಜಾಂಚಿಯಾಗಿ ಪರಶುರಾಮ ಎಂ.ಗಾಯಕವಾಡ ಅವರು ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮಸ್ತಾನಪ್ಪ ಬಿ.ಅರುಣಕರ್, ಸಹಾಯಕ ಚುನಾವಣಾಧಿಕಾರಿ ಈಶ್ವರ ಅಳ್ಳೋಳ್ಳಿ ಅವರು ತಿಳಿಸಿದ್ದಾರೆ.

ಫಲಿತಾಂಶ ಹೊರಬೀಳುತ್ತಿದ್ದಂತೆ ಬೆಂಬಲಿಗರು, ವಕೀಲರು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಚಂದ್ರಶೇಖರ್ ಅವಂಟಿ, ಎಸ್.ಪಿ ಸಾತನೂರಕರ್, ಗಂಗಾಧರ್ ಸಾಲಿಮಠ, ಮಲ್ಲಿಕಾರ್ಜುನ ಬೃಂಗಿಮಠ, ವಿ.ಎಸ್ ರೆಡ್ಡಿ, ಎಸ್.ಎಂ ಹೋಳಿ, ಬಿ.ಎಸ್ ಬೆನ್ನೂರ್, ಎನ್‌.ಬಿ ಕಡಬೂರ, ಎಸ್.ಎನ್ ಪಾಟೀಲ್, ಬಿ.ಬಿ ದೊಡ್ಡಮನಿ, ಎಲ್.ಎ ಪಾಟೀಲ, ಶರಣಗೌಡ ಪಾಟೀಲ್, ಗಿರಿಧರ್ ವೈಷ್ಣವ್, ಅಯ್ಯಣ್ಣ ಅವಂಟಿ, ಬಸವರಾಜ ಸಿಂಪಿ, ಅಶ್ವಥರಾಮ ಟಿ. ರಾಥೋಡ ಧನರಾಜ್ ದೇಶಪಾಂಡೆ, ಪ್ರಸಾದ್ ಅವಂಟಿ, ಎಚ್ಎನ್ ಶೇಕ್, ಎಸ್ ಎನ್ ಅನವಾರ್, ಸಿದ್ದರಾಜು ಹೂಗಾರ್, ಸುಜಾತ ಮೊಸಳೆ, ಮಂಜುಳಾ ಒಡೆಯರ್, ಜಗದೀಶ್ ಜಂಬಗಿ, ಪ್ರಭಾಕರ್ ದಿಗ್ಗಾಂವಕರ್, ಎಂ‌.ಎಸ್ ಹೊನಗುಂಟಿ, ಮಲ್ಲಿಕಾರ್ಜುನ್ ಸುಲೇಗಾಂವ್, ರಾಜು ಗೋಪಸೇನ್ ಸೇರಿದಂತೆ ಅನೇಕ ಹಿರಿಯ ಹಾಗೂ ಕಿರಿಯ ವಕೀಲರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!