Oplus_0

ಚಿತ್ತಾಪುರದಲ್ಲಿ ಹೋಳಿ ಸಂಭ್ರಮ: ಬಣ್ಣ ಎರಚುತ್ತ ಕುಣಿದಾಡಿದ ಯುವಜನತೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಂಗು ರಂಗಿನ ಹಬ್ಬ ಹೋಳಿಯನ್ನು ಪರಸ್ಪರ ಬಣ್ಣ ಹಚ್ಚಿ ಶುಭಾಶಯಗಳನ್ನು ಕೋರುವುದರ ಮೂಲಕ ಶುಕ್ರವಾರ ಅದ್ಧೂರಿಯಾಗಿ ಆಚರಿಸಲಾಯಿತು.

ಯುವಕ, ಯುವತಿಯರು ತಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ಹಾಡುಗಳಿಗೆ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು. ನಂತರ ನಂದಿ ಭಾವಿ, ಕಾಗಿಣಾ ನದಿ ಸೇರಿದಂತೆ ಇತರೆಡೆ ಸ್ನಾನ ಮಾಡುವ ಮೂಲಕ  ಸಡಗರದಿಂದ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ಯುವಕರ ಗುಂಪುಗಳು ವಿವಿಧೆಡೆಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿದ್ದವು. ದಾರಿ ಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ಹ್ಯಾಪಿ ಹೋಳಿ ಎನ್ನುತ್ತಾ ಶುಭಾಶಯಗಳನ್ನು ಹಂಚಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲ ಜಾತಿ ಜನಾಂಗದವರು ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡುಬಂತು.

ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು ನಗರದ ವಿವಿಧ ರಸ್ತೆಗಳಲ್ಲಿ, ಓಣಿಗಳಲ್ಲಿ ಯುವಕರು, ಯುವತಿಯರು ಡಿ.ಜೆ. ವ್ಯವಸ್ಥೆ ಮಾಡಿಕೊಂಡು ರಂಗಿನಾಟ ಆಡಿದರು.

ಈ ಸಂದರ್ಭದಲ್ಲಿ ಕಾಶಿನಾಥ ಗುತ್ತೇದಾರ, ರವಿಶಂಕರ್ ಬುರ್ಲಿ, ದಶರಥ ದೊಡ್ಡಮನಿ, ಮಹ್ಮದ್ ಇಬ್ರಾಹಿಂ, ಶಾಂತಕುಮಾರ್ ಮಳಖೇಡ, ಮಹ್ಮದ್ ಮಶಾಕ್,  ಅನಂತನಾಗ್ ದೇಶಪಾಂಡೆ, ಜಗದೇವ ಕುಂಬಾರ, ಹುಸನಯ್ಯ ಗುತ್ತೇದಾರ, ಪ್ರವೀಣ್ ಹಿಟ್ಟಿನ್, ಲಕ್ಷ್ಮೀಕಾಂತ ಅಲಚೇರಿ, ಕೇದರಗೌಡ ಸಾತನೂರು, ಪಂಕಜ್ ಗೌಡ್, ಶೇಖರ್ ಟೋಕಾಪೂರ, ಶಿವಶಂಕರ ಉಟಗೂರ, ಮಹಾಂತು ಮರಗೋಳ, ದೇವಪ್ಪ ಬೇನಕನಳ್ಳಿ, ಶಿವು ಕೊಟ್ರಕಿ, ವಸಂತ, ಬಸ್ಸಯ್ಯಾ, ಸೀನು, ನಾಗು ಮರಠಾ, ನೀಲು ಮದರಿ, ಶಿವು ಮರಠಾ, ರಾಘು ದೇವರಳ್ಳಿ, ಆನಂದ ಸೇರಿದಂತೆ ಅನೇಕರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!