ಕಲಬುರಗಿ ಜಿಲ್ಲಾ ಮಟ್ಟದ ನಾರಾಯಣ ಗುರುಗಳ ಜಯಂತ್ಯೋತ್ಸವ ಸಮಾರಂಭದಲ್ಲಿ ಚಿತ್ತಾಪುರ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಯ ಗುತ್ತೇದಾರ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರಗಿ ಜಿಲ್ಲೆಯಲ್ಲಿ ಇದೇ ಸೆ.16 ರಂದು ಎಸ್.ಎಂ.ಪಂಡಿತ್ ರಂಗ ಮಂದಿರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಚಿತ್ತಾಪುರ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕು ಎಂದು ಜಿಲ್ಲಾ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಡಾ.ವಿನಯ ಗುತ್ತೇದಾರ ಗಾರಂಪಳ್ಳಿ ಕರೆ ನೀಡಿದರು.
ಪಟ್ಟಣದ ವೆಂಕಟೇಶ್ ನಗರದ ಸುರೇಶ್ ಗುತ್ತೇದಾರ ನಿವಾಸದಲ್ಲಿ ಶುಕ್ರವಾರ ರಾತ್ರಿ ನಡೆದ ನಾರಾಯಣ ಗುರುಗಳ ಜಯಂತ್ಯೋತ್ಸವದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಗುರುಗಳ ಜಯಂತ್ಯೋತ್ಸವ ಬಹಳ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಖ್ಯಾತ ನಟ ವಿಜಯರಾಘವೇಂದ್ರ ಆಗಮಿಸುತ್ತಿದ್ದಾರೆ, ಜೊತೆಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಹಾಗೂ ಎಂಎಲ್ಸಿ ಬಿ.ಕೆ.ಹರಿಪ್ರಸಾದ್, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 18 ಜನ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ಪ್ರದಾನ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಅದರಲ್ಲೂ ಸಮುದಾಯದ 8, 9 ಮತ್ತು 10 ನೇ ತರಗತಿಯ 11 ಜನ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಅವರ ಶೈಕ್ಷಣಿಕ ಖರ್ಚು ನೋಡಿಕೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೇ ಐದು ಅಡಿ ಎತ್ತರದ ನಾರಾಯಣ ಗುರುಗಳ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಸಮಿತಿ ಉಪಾಧ್ಯಕ್ಷ ಶಿವರಾಜ್ ಗುತ್ತೇದಾರ, ಖಜಾಂಚಿ ಮಲ್ಲಿಕಾರ್ಜುನ ಗುತ್ತೇದಾರ ಕುಕ್ಕುಂದಿ, ಹಿರಿಯ ಮುಖಂಡ ಶಂಕರಗೌಡ ರಾವೂರಕರ್ ಲೀಡರ್ ಮಾತನಾಡಿದರು.
ಜಿಲ್ಲಾ ಮುಖಂಡರಾದ ವಿನಯ ಗುತ್ತೇದಾರ, ಮಹೇಶ್ ಗುತ್ತೇದಾರ ಗಾಣಗಾಪುರ, ಆನಂದ ಗುತ್ತೇದಾರ ಬಳ್ಳೂರಗಿ, ಮಹೇಶ್ ಗುತ್ತೇದಾರ ಹೊಳಕುಂದಾ, ರಾಜು ಗುತ್ತೇದಾರ, ಅಮೀತ್ ಪವಾರ್, ಮಲ್ಲಯ್ಯ ಗುತ್ತೇದಾರ ಜೇವರ್ಗಿ, ತಾಲೂಕು ಮುಖಂಡರಾದ ಕಾಶಣ್ಣ ಗುತ್ತೇದಾರ ಕರದಾಳ, ಸಣ್ಣ ಕಾಶಣ್ಣ ಗುತ್ತೇದಾರ, ನಾಗಯ್ಯ ಗುತ್ತೇದಾರ ಕರದಾಳ, ಶ್ರೀಮಂತ ಗುತ್ತೇದಾರ, ಉಮೇಶ್ ಗುತ್ತೇದಾರ ಕುಕ್ಕುಂದಿ, ಸುರೇಶ್ ಗುತ್ತೇದಾರ ಕರದಾಳ, ಪಂಕಜ್ ಗೌಡ, ಯಲ್ಲಯ್ಯ ಕಲಾಲ್, ರಕ್ಷಿತ್ ಮುಸ್ತಾಜರ್, ಕಾಶಿರಾಯ ಕಲಾಲ್, ಪುನೀತ್ ಗುತ್ತೇದಾರ, ರಾಜು ಗುತ್ತೇದಾರ ಆಲೂರು, ರವಿ ಸೂಲಹಳ್ಳಿ, ಹಣಮಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಅಳ್ಳೋಳ್ಳಿ, ನರಸಯ್ಯ ಗುತ್ತೇದಾರ, ಯೋಗೇಶ್ ಮುಸ್ತಾಜರ್, ರಮೇಶ್ ಗುತ್ತೇದಾರ ಸೇರಿದಂತೆ ಇತರರು ಇದ್ದರು. ಸಮಿತಿ ಸದಸ್ಯ ಕಾಶಿನಾಥ ಗುತ್ತೇದಾರ ನಿರೂಪಿಸಿದರು, ನಿವೃತ್ತ ಶಿಕ್ಷಕ ದೇವಪ್ಪ ನಂದೂರಕರ್ ವಂದಿಸಿದರು.

