ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ | ಪೋಕ್ಸೋ ಕಾಯ್ದೆಯುಡಿ ಅಪರಾಧಿಗಳಿಗೆ ಕಠೀಣ ಶಿಕ್ಷೆ: ನ್ಯಾಯಾಧೀಶ ಗುಜ್ಜರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: 18 ವರ್ಷದ ಒಳಗಿನ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಪೋಕ್ಸೋ ಕಾಯ್ದೆಯಡಿ ಅಪರಾಧಿಗಳಿಗೆ ನ್ಯಾಯಾಲಯ ಕಠೀಣ ಶಿಕ್ಷೆ ನೀಡುತ್ತದೆ ಎಂದು 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಧೀಶ ನ್ಯಾ. ಕರಣ ಗುಜ್ಜರ್ ಹೇಳಿದರು.
ಪಟ್ಟಣದ ಅಣ್ಣಿಮ್ಮ ಗೊಬ್ಬೂರ ಫ್ರೌಡ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ದಿ ಇಲಾಖೆ ಅವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಕ್ಸೊ ಕಾಯಿದೆಯು 18 ವರ್ಷಗಳ ಒಳಗಿನ ಯುವ ಸಮುದಾಯದ ಸುರಕ್ಷತೆಗಾಗಿ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಇತ್ತಿಚಿನ ದಿನಗಳಲ್ಲಿ ಮಕ್ಕಳು ದುಶ್ಚಟಗಳಿಗೆ ಮತ್ತು ಮೊಬೈಲ್ ಟೆಕ್ನೊಲಜಿಯ ಹಾವಳಿಗೆ ಮಾರು ಹೊಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡು ಕೆಟ್ಟ ಪರಿಣಾಮಗಳಿಗೆ ಗುರಿಯಾಗುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಮುಖ್ಯವಾಗಿ ದುಶ್ಚಟಗಳಿಂದ ಹಾಗೂ ಮೊಬೈಲ್‌ನಿಂದ ದೂರವಿರಬೇಕು ಅವಶ್ಯಕತೆ ಇದ್ದಾಗ ಶೈಕ್ಷಣಿಕವಾಗಿ, ಸಾಮಾನ್ಯ ಜ್ಞಾನಕ್ಕಾಗಿ ಬಳಸಿಕೊಂಡು ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮ ಶಿಕ್ಷಣ ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹೆಚ್ಚಿನ ಗಮನ ನೀಡಬೇಕು ಎಂದರು.
ಪೋಕ್ಸೋ ಕಾಯಿದೆಯು ಕುರಿತು ಯುವ ಸಮುದಾಯಕ್ಕೆ ಮಾಹಿತಿಗಾಗಿ ನ್ಯಾಯಲಯದಲ್ಲಿ ಉಚಿತವಾಗಿ ಕಾಯ್ದೆ ಕುರಿತು ಮಾಹಿತಿ ನೀಡಲಾಗುತ್ತಿದೆ ಇದರ ಸದುಪಯೊಗವನ್ನು ಯುವ ಸಮುದಾಯವು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಿವಿಲ್ ನ್ಯಾಯಧೀಶರಾದ ಅಭಿಷೇಕ ಜೋಶಿ, ಸಿಡಿಪಿಓ ಆರತಿ ತುಪ್ಪದ ಮಾತನಾಡಿದರು. ನ್ಯಾಯವಾದಿ ಮಂಜುಳಾ ಸರಡಗಿ ಪೊಕ್ಸೊ ಕಾಯ್ದೆಯ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೊಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಕ್ಕಳೊಂದಿಗೆ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡುವ ಜೊತೆಗೆ ಸಂವಾದ ನಡೆಸಿದರು.
ಅಪರ ಜಿಲ್ಲಾ ಸರ್ಕಾರಿ ವಕೀಲರಾದ ವಿ.ಅರ್ ಕಾಂತಾ, ಸಹಾಯಕ ಸರ್ಕಾರಿ ಅಭಿಯೊಜಕಿ ಅಂಜನಾದೇವಿ, ವಕೀಲರ ಸಂಘದ ಅಧ್ಯಕ್ಷ ಸೊಮಶೇಖರ ಕರದಳ್ಳಿ, ಪುರಸಭೆ ಮುಖ್ಯಾಧಿಕಾರಿ ಮನೊಜಕುಮಾರ ಗುರಿಕಾರ, ಪಿಎಸ್ಐ ಮಂಜುನಾಥ ರೆಡ್ಡಿ, ನ್ಯಾಯವಾದಿ ಚಂದ್ರಶೇಖರ ಅವಂಟಿ, ಭಿಮಶಪ್ಪ ವಾಡಿ, ಮಲ್ಲಿಕಾರ್ಜುನ ಹೊನಗುಂಟಿ, ಮುಖ್ಯ ಗುರುಗಳಾದ ಕಸ್ತೂರಿ ಪಾಟೀಲ್, ದೇವಿಂದ್ರಪ್ಪ ಇಮಾಡಾಪುರ, ಎಎಸ್‌ಐ ವಿಠಲ್ ಬಿರಾದಾರ ವೇದಿಕೆಯಲ್ಲಿದ್ದರು.
ಶಿಕ್ಷಕರಾದ ಶರಣಬಸಪ್ಪ ಬಮ್ಮನಳ್ಳಿ, ಗೀತಾ ಸೊಲಗೆ, ಲಲಿತಾ ರೆಡ್ಡಿ, ಮನೊಹರ ಹಡಪದ, ಶೈಲಜಾ ಹರಸೂರ, ಅಂಬರೀಶ, ಬಸಮ್ಮ, ಸೈಯದ ಸಲಿಂ, ನಾಗರಾಜ ಕುಲಕರ್ಣಿ, ಕಾಶಿಬಾಯಿ ಇತರರು ಇದ್ದರು. ಸಂಜನಾ ಹಿರೆಮಠ ಪ್ರಾರ್ಥನೆ ಗೀತೆ ಹಾಡಿದರು, ಚಂದ್ರಶೇಖರ ನಾಲವಾರ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.
