Oplus_0

ಸಾತನೂರ ದೈಹಿಕ ಶಿಕ್ಷಕ ದೇವಿಂದ್ರರೆಡ್ಡಿ ದುಗನೂರ ಅವರಿಗೆ ರಾಜ್ಯ ಮಟ್ಟದ ಆದರ್ಶ ಉಪಾಧ್ಯಾಯರ ಪ್ರಶಸ್ತಿ ಪ್ರದಾನ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲಬುರಗಿ ನಗರದ ಡಾ. ಎಸ್.ಎಮ್. ಪಂಡಿತ ರಂಗಮಂದಿರದಲ್ಲಿ ಆಧುನಿಕ ಭಾರತದ ಮಾತೆಯರಾದ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ರವರ 195ನೇ ಜನ್ಮದಿನೋತ್ಸವ ಮತ್ತು ಸ್ಕೂಪ್ಸ್ ರಾಜ್ಯ ಘಟಕದ ಉದ್ಘಾಟನಾ ಸಮಾರಂಭದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿದ ತಾಲೂಕಿನ ಸಾತನೂರ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ದೇವಿಂದ್ರರೆಡ್ಡಿ ದುಗನೂರ ರವರಿಗೆ 2026ನೇ ಸಾಲಿನ ಕರ್ನಾಟಕ ‘ರಾಜ್ಯ ಮಟ್ಟದ ಆದರ್ಶ ಉಪಾಧ್ಯಾಯರ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಸನ್ಮಾನಿಸಲಾಗಿದೆ.

ಈ ಸಂದರ್ಭದಲ್ಲಿ ಸ್ಕೂಪ್ಸ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ, ರಾಜ್ಯ ಕೋಶಾಧ್ಯಕ್ಷ ಝಾಕೀರಹುಸೇನ್ ಕುಪನೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಸಿ. ಕರಡ್ಡಿ ಸೇರಿದಂತೆ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ದೇವಿಂದ್ರರೆಡ್ಡಿ ದುಗನೂರ ಅವರಿಗೆ ಶಿಕ್ಷಕರು, ಹಿತೈಷಿಗಳು ಸನ್ಮಾನಿಸಿ ಗೌರವಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!