Oplus_0

ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಡಾ.ಸಿ.ಸೋಮಶೇಖರ ಪರ ರಾಜ್ಯಾದ್ಯಂತ ಪ್ರವಾಸ: ನಭಿಸಾಬ್ ಕುಷ್ಟಗಿ 

ನಾಗಾವಿ ಎಕ್ಸಪ್ರೆಸ್ 

ಸೇಡಂ: ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರ ಪರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ ಎಂದು ಕಸಾಪ ಕೇಂದ್ರ ಸಮಿತಿ ನಿಕಟಪೂರ್ವ ಸಂಘ ಸಂಸ್ಥೆ ಪ್ರತಿನಿಧಿ ನಭಿಸಾಭ್ ಕುಷ್ಟಗಿ ಹೇಳಿದರು.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಸಾಪ ಪದಾಧಿಕಾರಿಗಳಿಗೆ ಸೋಮವಾರ ಭೇಟಿ ಮಾಡಿ, ನಂತರ ಸೇಡಂ ಪಟ್ಟಣದಲ್ಲಿ ಕಸಾಪ ಪದಾಧಿಕಾರಿಗಳಿಗೆ ಮತ್ತು ಸಾಹಿತಿಗಳಿಗೆ ಭೇಟಿ ಮಾಡಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನ ಸೇವಾಕಾಂಕ್ಷಿ ಡಾ.ಸಿ.ಸೋಮಶೇಖರ ಅವರ ವೈಯಕ್ತಿಕ ಪರಿಚಯದ ಕರಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಕಳೆದ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯಿಂದ ಪ್ರಾರಂಭವಾದ ಪ್ರವಾಸ ಇಲ್ಲಿವರೆಗೆ 21 ಜಿಲ್ಲೆಗಳಲ್ಲಿ 41 ಸಾವಿರ ಕಿ‌.ಮೀ ಸಂಚರಿಸಿ, ಕಸಾಪ ಪದಾಧಿಕಾರಿಗಳು, ಅಜೀವ ಸದಸ್ಯರು, ಸಾಹಿತಿಗಳು ಸೇರಿದಂತೆ 7 ಸಾವಿರ ಜನರನ್ನು ಭೇಟಿ ಮಾಡಿದ್ದು ಸಂಪರ್ಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಎಲ್ಲಾ ಕಡೆ ಎಲ್ಲಾ ಸಾಹಿತಿಗಳಿಂದ ಮತ್ತು ಕಸಾಪ ಅಜೀವ ಸದಸ್ಯರಿಂದ ಉತ್ತಮ ಅಭಿಪ್ರಾಯ ಹಾಗೂ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ ಹೀಗಾಗಿ ಈ ಭಾಗದ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಜಾಪ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ್, ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಸಾಹಿತಿಗಳಾದ ಸಿದ್ದಪ್ಪ ತಳ್ಳಳ್ಳಿ, ಲಿಂಗಾರೆಡ್ಡಿ ಶೇರಿ, ಅಬ್ದುಲ್ ಕಲಾಂ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!