ಹರಸೂರ ರೇಣುಕಾಚಾರ್ಯರ ಜಯಂತಿಯ ಪಾದಯಾತ್ರೆಯಲ್ಲಿ ಭಾಗವಹಿಸಲು ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ತಾಲೂಕಿನ ಸುಕ್ಷೇತ್ರ ಹರಸೂರ ಗ್ರಾಮದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಶ್ರೀ ಗುರು ಕರಿಸಿದ್ದೇಶ್ವರ ಕಲ್ಮಠದಲ್ಲಿ ನಡೆದಿರುವ ಜಗದ್ಗುರು ರೇವಣಸಿದ್ದೇಶ್ವರ ಮಹಾಪುರಾಣ ಅಂಗವಾಗಿ ಫೆ. 22 ರಂದು ಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರು ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕು ಎಂದು ಶ್ರೀ ಗುರು ಕರಿಸಿದ್ದೇಶ್ವರ ಕಲ್ಮಠ ಹಾಗೂ ಯುವಕ ಮಂಡಳಿಯವರು ಮನವಿ ಮಾಡಿದ್ದಾರೆ
ಪುರಾಣ ಪ್ರವಚನಕಾರ ಶ್ರೀ ವೇದಮೂರ್ತಿ ಶಂಭುಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ರಟಕಲ್ ಇವರ ಸಮ್ಮುಖದಲ್ಲಿ ಹಾಗೂ ಸಮಸ್ತ ಹರಸೂರಿನ ಶಿಷ್ಯ ಸದ್ಭಕ್ತರು, ಹಾಗೂ ಸುತ್ತಮುತ್ತಲಿನ ಗ್ರಾಮದ ಸಕಲ ಭಕ್ತರು ಈ ಪಾದಯಾತ್ರೆಯಲ್ಲಿ ಭಾಗಿಯಾಗಿ, ರೇವಗಿ (ರಟಕಲ್)ಗುಡ್ಡ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದರ್ಶನ ಆಶೀರ್ವಾದ ಪಡೆದುಕೊಳ್ಳಬೇಕೆಂದು ಶ್ರೀಮಠದ ವತಿಯಿಂದ ಕೋರಲಾಗಿದೆ.

