ಚಿತ್ತಾಪುರ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಸಂತೋಷ ಪೂಜಾರಿ, ಎಸ್ಟಿ ಮೋರ್ಚಾ ಅಧ್ಯಕ್ಷ ರಾಜು ದೊರೆ ಅವರಿಗೆ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಸಂತೋಷ ಪೂಜಾರಿ ಮರಗೋಳ ಹಾಗೂ ಎಸ್.ಟಿ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ದೊರೆ ಮೊಗಲಾ ಅವರನ್ನು ಬಿಜೆಪಿ ಮುಖಂಡರು ಶುಕ್ರವಾರ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷ ನಮ್ಮನ್ನು ಗುರುತಿಸಿ ಗುರುತರವಾದ ಜವಾಬ್ದಾರಿ ನೀಡಿದೆ. ಹೀಗಾಗಿ ಇದನ್ನು ಸಮರ್ಥವಾಗಿ ನಿರ್ವಹಿಸಲಾಗುವುದು. ಈ ನಿಟ್ಟಿನಲ್ಲಿ ಮತಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೀರಶೆಟ್ಟಿ ಇವಣಿ, ನಾಗು ಲಕ್ಕಾ, ಬುಗ್ಗಯ್ಯ ಗೊಟಗಿ, ಯಲ್ಲಾಲಿಂಗ ಪೂಜಾರಿ ಮರಗೋಳ, ಅಮೃತ್ ನಿಪ್ಪಾಣಿ, ಬಸವರಾಜ್ ಹೆಬ್ಬಾಳ ಇದ್ದರು.

