ಇಂಗಳಗಿ ಗ್ರಾಮದ ಹತ್ತಿರ ಭೂಕಂಪನ ಕಂಡು ಬಂದಿಲ್ಲ ಯಾರೂ ಆತಂಕಕ್ಕೊಳಗಬಾರದು: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಇಂಗಳಗಿ ಗ್ರಾಮದ ಬಳಿ ಭೂಕಂಪನವಾಗಿರುವುದಾಗಿ ವದಂತಿ ಬಂದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರೊಂದಿಗೆ ಮಾತನಾಡಿದ್ದೇನೆ. ವಿಪತ್ತು ನಿರ್ವಹಣಾ ತಂಡದೊಂದಿಗೆ ಕೂಡಾ ಮಾತನಾಡಿದ್ದು, ಅಂತಹ ಯಾವುದೇ ಸೂಚನೆಗಳು ಕಂಡು ಬಂದಿಲ್ಲ ಹೀಗಾಗಿ ಯಾರೂ ಆತಂಕಕ್ಕೊಳಗಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸ್ಥಳೀಯ ಎಸಿಸಿ ಸಿಮೆಂಟ್ ಕಂಪನಿಯವರಿಂದಲೂ ಕೂಡಾ ಸ್ಥಳದಲ್ಲಿ ಯಾವುದೇ ಮೈನಿಂಗ್ ನಡೆಯುತ್ತಿಲ್ಲ. ಆದರೂ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಹಾಗಾಗಿ, ಯಾರೂ ಆತಂಕಕ್ಕೊಳಗಬಾರದು ಎಂದು ಸಚಿವರು ತಿಳಿಸಿದ್ದಾರೆ.
