ಜಾತಿ ಜನಗಣತಿಯಲ್ಲಿ ಈಡಿಗ ಎಂದು ನಮೂದಿಸಲು ಎಂಎಲ್ಸಿ ಜಗದೇವ ಗುತ್ತೇದಾರ ಕರೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರವು ಸೆ.22 ರಿಂದ ಅ.7 ರವರೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಡಿ ಜಾತಿ ಜನಗಣತಿ ನಡೆಸಲು ಸೂಚಿಸಿರುತ್ತದೆ. ಸಮಿಕ್ಷೆದಾರರು ನಿಮ್ಮ ಮನೆಯ ಬಾಗಿಲಿಗೆ ಬಂದು ಸಮಿಕ್ಷೆ ಮಾಡುವ ಸಂದರ್ಭದಲ್ಲಿ ಕಾಲಂ-8 ರಲ್ಲಿ ಹಿಂದು, ಕಾಲಂ-9 ರಲ್ಲಿ ಈಡಿಗ ಮತ್ತು ಕಾಲಂ-10 ರಲ್ಲಿ ಈಡಿಗ ಎಂದು ಬರೆಸಬೇಕೆಂದು ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಕರೆ ನೀಡಿದ್ದಾರೆ.
ಕುಟುಂಬದ ಪ್ರತಿ ಸದಸ್ಯರು ಆಧಾರ್ ಕಾರ್ಡ್ ಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿ, 5 ವರ್ಷದ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿ ಅದನ್ನು ಪಾಲಕರ ಪೋನ್ ಸಂಖ್ಯೆಗೆ ಲಿಂಕ್ ಮಾಡಿಸಬೇಕೆಂದು ಕೋರಿದ್ದಾರೆ.
ಈಡಿಗ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಇದೊಂದು ಅವಕಾಶ ಒದಗಿಬಂದಿದ್ದು, ಕಾರಣ ಗಣಿತಿದಾರರು ಮನೆಗೆ ಬಂದಾಗ ಸರಿಯಾದ ಮಾಹಿತಿ ನೀಡುವ ನಿಟ್ಟಿನಲ್ಲಿ ಜಾತಿ ಉಪಜಾತಿ ಕಾಲಂನಲ್ಲಿ ಈಡಿಗ ಎಂತಲೇ ಬೆರೆಸಬೇಕು ಈ ಮೂಲಕ ಖಾತ್ರಿಪಡಿಸಿಕೊಳ್ಳಬೇಕು ಎಂದು ಗುತ್ತೇದಾರ ಮನವಿ ಮಾಡಿದ್ದಾರೆ.

